ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅತ್ತೆ ಕಾಳಮ್ಮ(100) ನಿಧನರಾಗಿದ್ದಾರೆ.
ದೇವೇಗೌಡರ ಪತ್ನಿ ಚೆನ್ನಮ್ಮನವರ ತಾಯಿಯಾದ ಕಾಳಮ್ಮ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಾಲ್ಲಿಂದ ಮರಳಿದ ಬಳಿಕ ಹಾಸನದ ಮನೆಯಲ್ಲಿದ್ದರು.
ಅತ್ತೆ ನಿಧನದ ಹಿನ್ನೆಲೆಯಲ್ಲಿ ಶೃಂಗೇರಿಯಲ್ಲಿ ಶಾರದಾ ಪೀಠದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದಿಂದ ದೇವೇಗೌಡರು ವಾಪಾಸಾಗಿದ್ದಾರೆ. ಯಾಗದ ಎರಡನೇ ದಿನವಾದ ಇಂದು ದೇವೇಗೌಡ, ಅವರ ಪತ್ನಿ ಚೆನ್ನಮ್ಮ ಹಾಗು ಕುಟುಂಬದವರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೃತರ ಅಂತ್ಯಕ್ರಿಯೆ ಹೊಳೆನರಸೀಪುರ ತಾಲೂಕಿನ ಮುತ್ತಿಗೆ ಹಿರಿಯಳ್ಳಿಯಲ್ಲಿ ನಡೆಯುವುದೆಂದು ಮಾಹಿತಿ ಲಭ್ಯವಾಗಿದ್ದು ದೇವೇಗೌಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.