ಶಾಲೆಗೆ ಭದ್ರತೆ, ನೀರು ತಂದ ಲೋಕಾಯುಕ್ತ ಪೊಲೀಸ್ ಭೇಟಿ!
ಬೆಂಗಳೂರು: ಅಧಿಕಾರಿಗಳು ಸಂವೇದನಾಶೀಲರಾಗಿ ನಡೆದುಕೊಂಡರೆ ಉತ್ತಮ ಕೆಲಸಗಳಾಗುತ್ತವೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದ್ದು, ಭದ್ರತೆ ಸೌಲಭ್ಯಗಳು ಇಲ್ಲದಿದ್ದ ಶಾಲೆಗೆ ಲೋಕಾಯುಕ್ತ ಪೊಲೀಸರ್ ಅಧಿಕಾರಿಯ ಭೇಟಿ, ಭದ್ರತೆ ಹಾಗೂ ನೀರಿನ ಸೌಲಭ್ಯವನ್ನು ತಂದಿದೆ.
ಸತತ 8 ವರ್ಷಗಳಿಂದ ಹೊಸೂರು ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಶಾಲೆ ಕಾವೇರಿ ನೀರಿಗಾಗಿ ಮನವಿ ಸಲ್ಲಿಸಿದ್ದು, ಲೋಕಾಯುಕ್ತ ಪೊಲೀಸ್ ಭೇಟಿಯ ಬೆನ್ನಲ್ಲೇ ಈ ಶಾಲೆಗೆ ಮಿಂಚಿನ ವೇಗದಲ್ಲಿ ಕಾವೇರಿ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ.
2017 ರ ನ.25 ರಂದು ಶಾಲೆಗೆ ಭೇಟಿ ನೀಡಿದ್ದ ಲೋಕಾಯುಕ್ತ ಇನ್ಸ್ ಪೆಕ್ಟರ್ ಮಂಜುನಾಥ್ ಭೇಟಿ ನೀಡಿದ್ದು, ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯವೂ ಇರಲಿಲ್ಲ, " ಶಾಲೆಗೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗಮನಿಸಿ ತಕ್ಷಣವೇ ಸ್ಥಳೀಯ ಕಾರ್ಪೊರೇಟರ್ ಹಾಗೂ ಟ್ರಾಫಿಕ್ ಪೊಲೀಸ್, ಬಿಬಿಎಂಪಿ ಇಂಜಿನಿಯರ್, ಶಾಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು, ಸಭೆ ನಡೆದ ಒಂದು ವಾರದ ನಂತರ ಶಾಲೆಗೆ ಸೌಲಭ್ಯ ಕಲ್ಪಿಸಲಾಗಿದೆ, ಅಷ್ಟೇ ಅಲ್ಲದೇ ಶಾಲೆಗೆ ತಡವಾಗಿ ಬರುತಿದ್ದ ಶಿಕ್ಷಕರೂ ಸರಿಯಾದ ಸಮಯಕ್ಕೆ ಬರಲು ಪ್ರಾರಂಭಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.