ರಾಜ್ಯ

ಶೀಘ್ರದಲ್ಲಿಯೇ ಪ್ರವಾಸಿ ತಾಣವಾಗಲಿರುವ ಫ್ರೀಡಂಪಾರ್ಕ್

Nagaraja AB

ಬೆಂಗಳೂರು:ಹಲವು ಪ್ರತಿಭಟನೆ, ಮುಷ್ಕರ,ಧರಣಿ, ಸತ್ಯಾಗ್ರಹಗಳಿಗೆ ಪ್ರಮುಖ ಸ್ಥಳವಾಗಿರುವ ಬೆಂಗಳೂರಿನ ಫ್ರೀಡಂ ಪಾರ್ಕ್ ಶೀಘ್ರದಲ್ಲಿಯೇ ನಗರದ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ. ಇದರ ಮೇಲ್ವಿಚಾರಣೆಯನ್ನು ಬಿಬಿಎಂಪಿಯಿಂದ ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿದೆ.

ಈವರೆಗೂ ಬಿಬಿಎಂಪಿಯ ತೋಟಗಾರಿಕೆ ಸ್ಥಾಯಿ ಸಮಿತಿಯಿಂದ ಇದರ ನಿರ್ವಹಣೆ ಮಾಡಲಾಗುತ್ತಿತ್ತು, ಇದೀಗ ಐದು ವರ್ಷಗಳ ಅವಧಿಗೆ ಪ್ರವಾಸೋದ್ಯಮ ಇಲಾಖೆಗೆ ವಹಿಸುವ ಸಂಬಂಧ ಸ್ಥಾಯಿ ಸಮಿತಿ ನಿರ್ಣಯವೊಂದನ್ನು ಅಂಗೀಕರಿಸಲಾಗಿದೆ.

ಬೆಂಗಳೂರು ನಗರದಲ್ಲಿ ಮತ್ತೊಂದು ಪ್ರವಾಸಿ ತಾಣವನ್ನು ರೂಪಿಸಲು ವ್ಯಾಪಕವಾದ ಅವಕಾಶಗಳಿವೆ. ಈಗಾಗಲೇ ಮೂಲಸೌಕರ್ಯ ಅಭಿವೃದ್ಧಿ ನಡೆಯುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಮೌರ್ಯ ವೃತ್ತದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಹೊರತುಪಡಿಸಿದರೆ, ಫ್ರೀಡಂಪಾರ್ಕ್ ಇತ್ತೀಚಿನ ದಿನಗಳಲ್ಲಿ ಹಲವು ಪ್ರತಿಭಟನೆಗಳಿಗೆ ಪ್ರಮುಖ ಸ್ಥಳವಾಗಿದೆ. ಬಿಬಿಎಂಪಿ ನಿರ್ಧಾರದಿಂದ ಪ್ರತಿಭಟನೆ ಹಕ್ಕನ್ನೇ ಕಸಿದುಕೊಳ್ಳಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ,  ಬಿಬಿಎಂಪಿಯಿಂದ ಪ್ರವಾಸೋದ್ಯಮ ಇಲಾಖೆ ಇದರ ಉಸ್ತುವಾರಿ ಪಡೆದುಕೊಂಡಿದೆ. ಪ್ರತಿಭಟನೆಗಳು ಫ್ರೀಡಂಪಾರ್ಕಿನ ಹೊರಗೆ ನಡೆಯುತ್ತವೆ, ಒಳಗಡೆ ನಡೆಯುವುದಿಲ್ಲ. ಜನಾಕರ್ಷಣೆ ಹೆಚ್ಚಿಸುವ ನಿಟ್ಟಿನಲ್ಲಿ  ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

SCROLL FOR NEXT