ಬೆಂಗಳೂರು; ಭೂ ವ್ಯವಹಾರ ಸಂಬಂಧ ಪರಿಚಿತ ರಿಯಲ್ ಎಸ್ಟೇಟ್ ಉದ್ಯಮಿ ಲಕ್ಷಾಂತರ ಹಣ ನೀಡದೆ ವಂಚಿಸಿದ್ದಾರೆಂದು ಆರೋಪಿಸಿ ಗೌರಿ ಬಿದನೂರು ತಾಲೂಕಿನ ರಿಯಲ್ ಎಸ್ಟೇಟ್ ಏಂಜೆಟ್ ವೊಬ್ಬರು ವಿಧಾನಸೌಧದ ಮುಂದೆ ಶನಿವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ.
ಗೌರಿ ಬಿದನೂರು ತಾಲೂಕಿನ ಎಂ. ಜಾಲಹಳ್ಳಿ ನಿವಾಸಿಯಾಗಿರುವ ಗಂಗಾಧರ್ (40) ಆತ್ಮಹತ್ಯೆಗೆ ಯತ್ನ ನಡೆಸಿದ್ದ ವ್ಯಕ್ತಿಯೆಂದು ಗುರ್ತಿಸಲಾಗಿದೆ. ಪ್ರಸ್ತುತ ವ್ಯಕ್ತಿ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಿಗ್ಗೆ 11.30 ಸುಮಾರಿಗೆ ವಿಧಾನಸೌಧ ಪ್ರವೇಶಿ ದ್ವಾರ 2ರ ಬಳಿಗೆ ಬಂದಿರುವ ಗಂಗಾಧರ್ ಅವರು, ಏಕಾಏಕಿ ಕಾರಿನಿಂದ ಇಳಿದು ನನಗೆ ಅನ್ಯಾಯವಾಗಿದೆ ಎಂದು ಕೂಗಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ.
ಕೂಡಲೇ ಸ್ಥಳದಲ್ಲಿದ್ದ ಭದ್ರತಾ ಪೊಲೀಸರು ಗಂಗಾಧರ್ ಅವರನ್ನು ರಕ್ಷಣೆ ಮಾಡಿದ್ದಾರೆಂದು ತಿಳಿದುಬಂದಿದೆ.
ಮಧ್ಯಾಹ್ನ 12.15 ಸುಮಾರಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಬೇಕೆಂದು ಉದ್ಯಮಿ ಗಂಗಾಧರ್ (38)ಎಂಬುವವರು ಬಂದಿದ್ದರು. ಕೆಂಗಲ್ ಹನುಮಂತಯ್ಯ ಗೇಟ್ ಬಳಿ ಕಾದು ನಿಂತಿದ್ದರು. ಕಾರಿನಲ್ಲಿ ಕುಳಿತುಕೊಂಡೇ ಗಂಗಾಧರ್ ಅವರು ಇದ್ದಕ್ಕಿದ್ದಂತೆ ವಿಷ ಸೇವಿಸಿದರು. ಇದನ್ನು ನೋಡಿದ ಸ್ಥಳೀಯರು ಕೂಡಲೇ ಮಾಹಿತಿ ನೀಡಿದ್ದರು. ಬಳಿಕ ವ್ಯಕ್ತಿಯನ್ನು ಮಲ್ಲಿಗೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ವ್ಯಕ್ತಿತ ಸ್ಥಿತಿ ಇದೀಗ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವ ಸಲುವಾಗಿ ವ್ಯಕ್ತಿಯ ಹೇಳಿಕೆ ದಾಖಲಿಸಿಕೊಳ್ಳಲು ಕಾಯಲಾಗುತ್ತಿದೆ. ಕೆಲಸವೊಂದನ್ನು ಮಾಡಿಕೊಡುವ ಸಲುವಾಗಿ ಉದ್ಯಮಿ ಶಾಸಕರೊಬ್ಬರಿಗೆ ರೂ.1 ಕೋಟಿ ಹಣವನ್ನು ನೀಡಿದ್ದು, ಹಣ ಪಡೆದ ಬಳಿಕ ಶಾಸಕ ವ್ಯಕ್ತಿಯನ್ನು ನಿಯಂತ್ರಿಸಿದ್ದಾರಲ್ಲದೆ, ನೀಡಿದ್ದ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಕೆಲಸ ಮಾಡಿಕೊಡದಿರುವುದಕ್ಕೆ ಹಣವನ್ನು ಹಿಂತಿರುಗಿಸಿಲ್ಲ. ಇದರಿಂತ ಚಿಂತಿತರಾಗಿದ್ದ ಉದ್ಯಮಿ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics