ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಅಂಜನಾಪುರ ಸೇತುವೆ ಬಳಿ ಭೀಕರ ಅಪಘಾತ; ಇಬ್ಬರು ಸಾವು

ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣಾ ನಿಯಂತ್ರಣಕ್ಕೆ ಬರುವ ನೈಸ್ ರಸ್ತೆಯ ಅಂಜನಾಪುರ ಸೇತುವೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ...

ಸಾಂದರ್ಭಿಕ ಚಿತ್ರ
Manjula VN
Updated On : 3 Jul 2018, 12:58 pm
ಬೆಂಗಳೂರು; ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣಾ ನಿಯಂತ್ರಣಕ್ಕೆ ಬರುವ ನೈಸ್ ರಸ್ತೆಯ ಅಂಜನಾಪುರ ಸೇತುವೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. 
ಮೃತರನ್ನು ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿ ಪ್ರಕಾಶ್ (28) ಹಾಗೂ ಅವರ ಗೆಳೆಯ ದಾವಣಗೆರೆ ಮೂಲದ ನಿವಾಸಿ ಆಂಜನೇಯ (24) ಎಂದು ಗುರ್ತಿಸಲಾಗಿದೆ. 
ಮೃತಪಟ್ಟ ಪ್ರಕಾಶ್ ಮನೆಯ ಹತ್ತಿರವಿರುವ ದೇವಾಲಯವೊಂದರಲ್ಲಿ ಪೂಜಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆಂಜನೇಯ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. 

Advertisement

Advertisement

ಪ್ರಕಾಶ್ ಹಾಗೂ ಆಂಜನೇಯ ಇಬ್ಬರೂ ಭಾನುವಾರ ರಾತ್ರಿ ಹೊರಗೆ ಹೋಗಿದ್ದರು. ಮನೆಗೆ ಹಿಂತಿರುವ ವೇಳೆ ರಾತ್ರಿ 11.45ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಅಂಜನಾಪುರ ಸೇತುವೆ ರಸ್ತೆಯ ಮಧ್ಯೆ ನಿಲ್ಲಿಸಿದ್ದ ಗೂಡ್ಸ್ ಆಟೋವನ್ನು ಗಮನಿಸಿದ ಪ್ರಕಾಶ್ ಅವರು, ದ್ವಿಚಕ್ರ ವಾಹನದಲ್ಲಿ ರಭಸದಿಂದ ಡಿಕ್ಕಿ ಹೊಡೆದಿದ್ದಾರೆ. 
ಇಬ್ಬರೂ ಹೆಲ್ಮೆಟ್ ಧರಿಸದ ಕಾರಣ ತಲೆಗಳಿಗೆ ಗಂಭೀರವಾಗಿ ಗಾಯಗಳಾಗಿವೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಆಟೋ ಚಾಲಕ, ಆಟೋವನ್ನು ಸ್ಥಳದಲ್ಲಿಯೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement