ರಾಜ್ಯ

ಇನ್ನು ಮುಂದೆ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸುಗಳ ಜಾರಿ

Sumana Upadhyaya

ಬೆಂಗಳೂರು: ಉನ್ನತಮಟ್ಟದ ಶಿಕ್ಷಣದಲ್ಲಿ ಸ್ಯಾಟಲೈಟ್ ಆಧಾರಿತ ಶಿಕ್ಷಣ ಎಜುಸ್ಯಾಟ್ ನ್ನು ದೇಶದಲ್ಲಿ ಮೊದಲ ಬಾರಿಗೆ ಅಳವಡಿಸಿದ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸಂವಾದಾತ್ಮಕ ಆಧಾರಿತ ಸ್ಮಾರ್ಟ್ ಕ್ಲಾಸ್ ಗಳನ್ನು ಜಾರಿಗೆ ತರಲು ಮುಂದಾಗಿದೆ.

ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸಂವಾದಾತ್ಮಕ ತರಗತಿಗಳನ್ನು ಅಳವಡಿಸಲು ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಹೇಳಿದ್ದು, ಎಜುಸ್ಯಾಟ್ ತರಗತಿಗಳಿಗೆ ಈಗಿರುವ ಸೌಲಭ್ಯಗಳನ್ನು ಉಪಯೋಗಿಸುವಂತೆ ಹೇಳಿದೆ.

ಈಗಿರುವ ವ್ಯವಸ್ಥೆ ಮತ್ತು ಸಾಧನಗಳು ಬದಲಾಗುವುದಿಲ್ಲ. ಇಲ್ಲಿಯವರೆಗೆ ವಿದ್ಯಾರ್ಥಿಗಳು ವಿಷಯ ತಜ್ಞರು ಬೆಂಗಳೂರಿನ ಸ್ಟುಡಿಯೊದಿಂದ ನೀಡುವ ಉಪನ್ಯಾಸಗಳನ್ನು ಮಾತ್ರ ಆಲಿಸಬಹುದಾಗಿತ್ತು. ಇನ್ನು ಮುಂದೆ ಸಂವಾದಾತ್ಮಕ ತರಗತಿಗಳಲ್ಲಿ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ತಮ್ಮ ಸಂದೇಹವನ್ನು ಬಗೆಹರಿಸಿಕೊಳ್ಳಬಹುದು ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಹೆಚ್ ಯು ತಲ್ವರ್ ಹೇಳುತ್ತಾರೆ.

ಉನ್ನತ ಶಿಕ್ಷಣಗಳ ಇಲಾಖೆ 2016ರಲ್ಲಿ ರಚಿಸಿದ ಸಮಿತಿ ಸಲ್ಲಿಸಿದ ವರದಿ ಪ್ರಕಾರ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

SCROLL FOR NEXT