ಬೆಂಗಳೂರು: ಉಚಿತ ಬಸ್ ಪಾಸ್ ವಿತರಿಸಲು ಸರ್ಕಾರ ಹಿಂದೇಟು ಹಾಕುತ್ತಿರುವ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ರೂ.350 ಕೋಟಿಗಳ ಅಗತ್ಯವಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಈ ವರೆಗೂ ಬಿಎಂಟಿಸಿ ವಿದ್ಯಾರ್ಥಿಗಳಿಗೆ 4 ಲಕ್ಷ ಬಸ್ ಪಾಸ್ ಗಳನ್ನು ವಿತರಿಸಿದ್ದು, ಈ ಪಾಸ್ ಗಳಿಗೆ ಈಗಾಗಲೇ ಸಬ್ಸಿಡಿಗಳನ್ನು ನೀಡಲಾಗಿದೆ. ಇನ್ನು ವಿದ್ಯಾರ್ಥಿಗಳ ಪಾಸ್ ಗಳಿಗೆ ಸರ್ಕಾರ ಈಗಾಗಲೇ ಶೇ.50 ರಷ್ಟು ಅಂದರೆ ರೂ.250 ಕೋಟಿ ಹಣವನ್ನು ನೀಡಿದೆ. ಬಿಎಂಟಿಸಿ ಶೇ.25 ರಷ್ಟು ಅನುದಾನವನ್ನು ಭರಿಸುತ್ತಿದೆ. ಅಂದರೆ, ರೂ.40 ಕೋಟಿಯಷ್ಟು ಬಿಎಂಟಿಸಿ ನೀಡುತ್ತಿದೆ. ಇನ್ನುಳಿದ ಶೇ.25 ರಷ್ಟು ಹಣವನ್ನು ವಿದ್ಯಾರ್ಥಿಗಳು ಬಸ್ ಪಾಸ್ ಗಳಿಗೆ ನೀಡಬೇಕಾಗುತ್ತದೆ. ಆದರೆ, ವಿದ್ಯಾರ್ಥಿಗಳು ಶೇ.25 ರಷ್ಟು ಅನುದಾನವನ್ನೂ ನೀಡುವಂತೆ ಆಗ್ರಹಿಸುತ್ತಿದ್ದಾರೆ.
ಸರ್ಕಾರ ಹಣವನ್ನು ನೀಡದೇ ಹೋದರೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಸಾಧ್ಯವಾಗುವುದಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.
ಕೆಲ ವರ್ಷಗಳಿಂದ ಬಿಎಂಟಿಸಿ ನಷ್ಟದಲ್ಲಿಯೇ ಮುಂದೆ ಸಾಗುತ್ತಿದೆ. ಎರಡು ವರ್ಷಗಳಿಂದ ಸಾರಿಗೆ ಇಲಾಖೆಗೆ ರೂ.200 ಕೋಟಿ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಆದರೆ, ವಿದ್ಯಾರ್ಥಿಗಳು ಹಾಗೂ ಹೋರಾಟಗಾರರು ನಮಗೆ ಕಾರಣಗಳು ಬೇಕಿಲ್ಲ. ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲೇಬೇಕೆಂದು ಆಗ್ರಹಿಸುತ್ತಿದ್ದಾರೆ.
ಸಾರ್ವಜನಿಕ ಸಾರಿಗೆ ಇಲಾಖೆ ಲಾಭ ಹಾಗೂ ನಷ್ಟಗಳನ್ನು ನೋಡುವುದರ ಬದಲು ಸಾಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಬೇಕೆಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ನಾಯಕ ವಿನಯ್ ಶ್ರೀನಿವಾಸ್ ಅವರು ಹೇಳಿದ್ದಾರೆ.
ಪೊಲೀಸ್ ಠಾಣೆಗಳ ಕುರಿತಂತೆ ಮಾತನಾಡಿದಾಗ, ಲಾಭ ಹಾಗೂ ನಷ್ಟಗಳನ್ನು ನೋಡುವುದಿಲ್ಲ. ಪೊಲೀಸರು ಇರುವುದು ಜನರಿಗಾಗಿ ಎಂದು ನೋಡುತ್ತೇವೆ. ಎಲ್ಲರಿಗೂ ಸೌಲಭ್ಯಗಳಿರುವುದಿಲ್ಲ. ಸಾರಿಗೆ ಹೊರೆಯನ್ನು ಭರಿಸಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದಿ ತಿಳಿಸಿದ್ದಾರೆ.
ಬಿಎಂಟಿಸಿಗೆ ರಾಜ್ಯ ಸರ್ಕಾರ ಸಹಾಯ ಮಾಡಬೇಕು. ರೂ.15,000 ಕೋಟಿ ಹಣವನ್ನು ಎಲಿವೇಟೆಡ್ ಕಾರಿಡಾರ್ ಮತ್ತು ಮೆಟ್ರೋ 2 ಹಂತಕ್ಕೆ ರೂ.26,000 ಕೋಟಿ ಹಣವನ್ನು ನೀಡುವ ಸರ್ಕಾರ ಬಿಎಂಟಿಸಿಗೆ ರೂ.1,000 ಕೋಟಿ ನೀಡಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಸಹಾಯ ಮಾಡಲು ಸಾಧ್ಯವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬಿಎಂಟಿಸಿಯಲ್ಲಿ ಪ್ರತೀನಿತ್ಯ 32 ಲಕ್ಷ ಜನರು ಪ್ರಯಾಣಿಸುತ್ತಾರೆ. ಮೆಟ್ರೋದಲ್ಲಿ 5 ಲಕ್ಷ ಜನರು ಪ್ರಯಾಣಿಸುತ್ತಾರೆ. ವಾಸ್ತವಿಕವಾಗಿ ನೋಡಿದರೆ, ಬಿಎಂಟಿಸಿ ಮೇಲೆ ಅಂತಹ ದೊಡ್ಡ ಪರಿಣಾಮಗಳೇನೂ ಬೀರುವಿದಿಲ್ಲ ಎಂದಿದ್ದಾರೆ.