ರಾಜ್ಯ

ರಾಮನಗರ: ಜಮೀನು ಸಿಗಲಿಲ್ಲ ಎಂದು ತಾಯಿಯನ್ನೇ ಕೊಂದು ಶೌಚಗುಂಡಿಯಲ್ಲಿ ಹೂತಿಟ್ಟ ಮಗ!

Raghavendra Adiga
ರಾಮನಗರ: ಜಮೀನು ವಿವಾದದಿಂದ ಉಂಟಾದ ಜಗಳದ ಕಾರಣ ಮಗನೊಬ್ಬ ತನ್ನ ತಾಯಿಯನ್ನೇ ಕೊಂದು ಶೌಚಾಲಯದಲ್ಲಿ ಹೂತಿಟ್ಟ ಅಮಾನುಷ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ರಾಮನಗರದ  ಚೆನ್ನಪಟ್ಟಣದ ನಾಗವಾರ ಗ್ರಾಮದ ನಾಗಮ್ಮ (70) ಕೊಲೆಯಾದ ದುರ್ದೈವಿ. ಮಗ ಸುರೇಶ್ ತನ್ನ ತಾಯಿಯನ್ನು ಕಳೆದ ಮೂರು ದಿನಗಳ ಹಿಂದೆ ಕೊಂದದ್ದಲ್ಲದೆ ಆಕೆಯ ಶವವನ್ನು ಮನೆಯ ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿದ್ದ.
ಮೃತ ನಾಗಮ್ಮನ ಹೆಸರಿನಲ್ಲಿದ್ದ  10 ಗುಂಟೆ ಜಮೀನನ್ನು ತನ್ನ ಹೆಸರಿಗೆ ಬರೆದು ಕೊಡಬೇಕೆಂದು ಸುರೇಶ್ ಪಟ್ಟು ಹಿಡಿದಿದ್ದ. ಕಳೆದ ಹಲವು ದಿನಗಳಿಂದ ತಾಯಿ ಮಗನ ನಡುವೆ ಮನಸ್ತಾಪಕ್ಕೆ ಕಾರಣವಾಗಿದ್ದ ಈ ವಿಚಾರ ಮೂರು ದಿನಗಳ ಹಿಂದೆಯೂ ಜಗಳಕ್ಕೆ ಕಾರಣವಾಗಿತ್ತು. ಮದ್ಯ ಸೇವಿಸಿ ಮನೆಗೆ ಬಂದಿದ್ದ ಸುರೇಶ್ ಅಂದು ತನ್ನ ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ, ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ.
ಸಧ್ಯ ಎಂಕೆ ದೊಡ್ಡಿ ಪೋಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೌಚಗುಂಡಿಯಲ್ಲಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.
SCROLL FOR NEXT