ರಾಜ್ಯ

ನಾವು ಸಾಯಬೇಕೆ ಇಲ್ಲ ಬದುಕಬೇಕೆ?; ಸಿಎಂ ಕುಮಾರಸ್ವಾಮಿಗೆ ನೊಂದ ರೈತನ ಪ್ರಶ್ನೆ

Sumana Upadhyaya

ಮಂಡ್ಯ: ಸಾಲ ಮರುಪಾವತಿಸುವಂತೆ ಸಹಕಾರಿ ಬ್ಯಾಂಕ್‍ನಿಂದ ಬಂದ ನೊಟೀಸ್ ನಿಂದ ನೊಂದ ರೈತ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿರುವ ಘಟನೆ ನಡೆದಿದೆ. ತಮ್ಮ ಸಮಸ್ಯೆಗಳನ್ನು ಸಾಮಾಜಿಕ ಮಾಧ್ಯಮ ಮೂಲಕ ಹೊರಹಾಕುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ.

ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಹಕ್ಕಿಮಂಚನಹಳ್ಳಿ ಗ್ರಾಮದ ರೈತ ಹೊನ್ನೇಗೌಡ ಶೀಳನೆರೆ ಸಾಮಾಜಿಕ ಮಾಧ್ಯಮ ಮೂಲಕ ಆಕ್ರೋಶ ಹೊರಹಾಕಿದ ರೈತ. ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಕಳೆದ ವರ್ಷ ಆಗಸ್ಟ್ 9ರಂದು 60 ಸಾವಿರ ಬೆಳೆ ಸಾಲ ಪಡೆದಿದ್ದರು. ಇದೀಗ ರೈತ ಪಡೆದ ಸಾಲಕ್ಕೆ ನೋಟಿಸ್ ನೀಡಲಾಗಿದ್ದು, ಇದೇ ಆಗಸ್ಟ್ 9ರೊಳಗೆ  ಸಾಲ ಮರುಪಾವತಿಸಿ ಮುಂದೆ ಸಾಲ ಪಡೆಯಲು ಅರ್ಹತೆ ಪಡೆಯಿರಿ. ತಪ್ಪಿದರೆ ನಿಯಮದ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ನೋಟಿಸ್‍ನಲ್ಲಿ ಸೂಚಿಸಲಾಗಿದೆ.

ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡುತ್ತದೆ ಎಂದು ಮೀನಮೇಷ ಎಣಿಸುತ್ತಲೇ ಇದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು 2018 ಜುಲೈ 10ರವರೆಗೆ ರೈತರ ಸಾಲಮನ್ನಾ ಎಂದಿದ್ದಾರೆ. ಆದರೆ ಸಾಲ ಕಟ್ಟಿ, ಇಲ್ಲದಿದರೆ ಕಾನೂನಿನ ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದು ನೋಟಿಸ್ ನೀಡಿದ್ದಾರೆ. ಈ ಸಂಕಷ್ಟದಲ್ಲಿ ರೈತ ಸಾಯಬೇಕ? ಬದುಕಬೇಕ? ರೈತನ ಬದುಕು ಅತಂತ್ರ ಮಾಡಿರುವ ಕುಮಾರಸ್ವಾಮಿಯವರೇ ಇದರ ಬಗ್ಗೆ ಯೋಚಿಸಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನೋವು, ಆಕ್ರೋಶಗಳನ್ನು ಹೊರಹಾಕಿದ್ದಾರೆ.

SCROLL FOR NEXT