'ಕಾಳ'ನನ್ನು ಬಿಡುಗಡೆ ಮಾಡದಿರೋದೇ ಸೂಕ್ತ: ಸಿಎಂ ಕುಮಾರಸ್ವಾಮಿ ವೈಯಕ್ತಿಕ ಅಭಿಪ್ರಾಯ!
ಬೆಂಗಳೂರು: ಕರ್ನಾಟಕದಲ್ಲಿ ರಜನಿಕಾಂತ್ ಅಭಿನಯದ ಕಾಳ ಚಿತ್ರದ ಬಿಡುಗಡೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಈ ಬೆನ್ನಲ್ಲೇ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಸರ್ಕಾರ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸುತ್ತದೆ ಎಂದು ಭರವಸೆ ನೀಡಿದ್ದಾರೆ.
ಕಾಳ ಚಿತ್ರ ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್ ಡಿ ಕುಮಾರಸ್ವಾಮಿ, ರಜನೀಕಾಂತ್ ನಟನೆಯ ಕಾಳ ಚಿತ್ರದ ಬಿಡುಗಡೆಯನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವುದನ್ನು ಮುಂದೂಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸರ್ಕಾರ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸಲಿದೆ. ಹೈಕೋರ್ಟ್ ಆದೇಶ ಪಾಲಿಸುವುದು ಸರ್ಕಾರದ ಜವಾಬ್ದಾರಿ ಎಂದಿದ್ದಾರೆ.
ಆದರೆ ವೈಯಕ್ತಿಕವಾಗಿ, ಕನ್ನಡಿಗನಾಗಿ ಈ ಪರಿಸ್ಥಿತಿಯಲ್ಲಿ ಚಿತ್ರದ ಬಿಡುಗಡೆ ಸೂಕ್ತ ಅಲ್ಲ ಎಂದು ನಾನು ಚಿತ್ರದ ನಿರ್ಮಾಪಕರು ಹಾಗೂ ವಿತರಕರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ತಾವೂ ಓರ್ವ ನಿರ್ಮಾಪಕರಾಗಿದ್ದು ಈ ರೀತಿಯ ಪರಿಸ್ಥಿತಿಯಲ್ಲಿ ಚಿತ್ರ ಬಿಡುಗಡೆ ಮಾಡಿದರೆ ಚಿತ್ರಕ್ಕೆ ಆರ್ಥಿಕವಾಗಿಯೂ ಉಪಯೋಗವಾಗುವುದಿಲ್ಲ ಎಂದಿದ್ದಾರೆ.