ರಾಜ್ಯ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಯಾಣಿಕರಿಗೆ ಉಚಿತ ಸ್ಥಳೀಯ ಸಿಮ್ ಕಾರ್ಡು

Sumana Upadhyaya

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಜನಸ್ನೇಹಿ ಸೌಕರ್ಯಗಳನ್ನು ತರಲಾಗಿದೆ. ಅವುಗಳಲ್ಲಿ ಒಂದು ಸ್ಥಳೀಯ ಉಚಿತ ಸಿಮ್ ಕಾರ್ಡುಗಳು ವಿದೇಶಿ ಪ್ರಯಾಣಿಕರಿಗೆ ಸಿಗುವಂತೆ ಮಾಡುವುದು ಮತ್ತು ಇನ್ನೊಂದು ಶಿಶುಗಳನ್ನು ಓಡಾಡಿಸಲು ಉಚಿತ ಬೇಬಿ ಸ್ಟ್ರಾಲರ್ ಸೇವೆಗಳು.

ಅಂತಾರಾಷ್ಟ್ರೀಯ ಪ್ರಯಾಣಿಕರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಮೊಬೈಲ್ ಸಿಮ್ ಕಾರ್ಡುಗಳ ಅವಶ್ಯಕತೆಯಿರುತ್ತದೆ. ಇಂತವರಿಗೆ ಸಿಮ್ ಕಾರ್ಡುಗಳು ಮತ್ತು ದೇಶಿ ಪ್ರಯಾಣಿಕರಿಗೆ ಮಲ್ಟಿಪಲ್ ಸಿಮಿ ಕಾರ್ಡು ಆಯ್ಕೆಗಳನ್ನು ನೀಡಿ ಅದು ತಕ್ಷಣ ಆಕ್ಟಿವೇಟ್ ಆಗುವಂತಹ ಸೌಕರ್ಯಗಳನ್ನು ಒದಗಿಸಲಾಗುತ್ತದೆ.

ಸಿಮ್ ಕಾರ್ಡುಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು ಟಾಪ್ ಅಪ್ ಮಾಡುವಾಗ ಹಣ ತೆಗೆದುಕೊಳ್ಳಲಾಗುತ್ತದೆ. ವೊಡಫೋನ್, ಜಿಯೊ, ಏರ್ ಟೆಲ್ ಸಿಮ್ ಕಾರ್ಡುಗಳನ್ನು ಸಿಎಕ್ಸ್ ಸೊಲ್ಯುಶನ್ ನೀಡುತ್ತದೆ. ಸಿಮ್ ಕಾರ್ಡುಗಳು ಮಾತ್ರವಲ್ಲದೆ ಸಿಎಕ್ಸ್ ಸೊಲ್ಯುಷನ್ಸ್ ವೈ ಫೈ ಡೊಂಗಲ್ಸ್ ಮತ್ತು ಇತರ ಸಾಧನಗಳನ್ನು ಕೂಡ ನೀಡುತ್ತದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾವೆದ್ ಮಲಿಕ್ ಹೇಳಿಕೆಯನ್ನು ಬಿಡುಗಡೆ ಮಾಡಿ, ದೇಶದ ಐಟಿ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಇಲ್ಲಿಗೆ ಬರುವ ಅತಿಥಿಗಳಿಗೆ ಉತ್ತಮ ತಾಂತ್ರಿಕ ಸೇವೆ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಹಲವು ಪ್ರಮುಖ ಸೇವೆಗಳ ಜೊತೆಗೆ ಮೊಬೈಲ್ ಸಂಪರ್ಕ ಔಟ್ ಲೆಟ್ ಹೆಚ್ಚುವರಿ ಸೇರ್ಪಡೆಯಾಗಿದೆ.

ಬೇಬಿ ಸ್ಟ್ರೋಲರ್: ವಿಮಾನ ನಿಲ್ದಾಣದ ಒಳಗೆ ಬೇಬಿ ಸ್ಟ್ರಾಲರ್ ನ್ನು ಕೂಡ ಆರಂಭಿಸಲಾಗಿದೆ. ಇದನ್ನು ಫಸ್ಟ್ ಕ್ರೈ ಸಂಸ್ಥೆ ನಿರ್ವಹಿಸುತ್ತಿದ್ದು ಅದು ಶಿಶುಗಳ ಉತ್ಪನ್ನದ ಆನ್ ಲೈನ್ ಪೋರ್ಟಲ್ ಆಗಿದೆ. ತರಬೇತಿ ಪೊಂದಿದ ಸಿಬ್ಬಂದಿ ಸರಳ, ಡಿಜಿಟಲೀಕೃತ ಪ್ರಕ್ರಿಯೆ ಮೂಲಕ ಸ್ಟ್ರೋಲರ್ ನ್ನು ನೀಡುತ್ತಾರೆ.

SCROLL FOR NEXT