ಸಾಂದರ್ಭಿಕ ಚಿತ್ರ 
ರಾಜ್ಯ

ನೂತನ ಸಚಿವರಿಂದ ಕಚೇರಿಗಳಲ್ಲಿ ಹೋಮಹವನ: ಶುಭ ಮೂಹೂರ್ತದಲ್ಲಿ ಕೊಠಡಿ ಪ್ರವೇಶ

ಹಲವು ದಿನಗಳಿಂದ ನಡೆಯುತ್ತಿದ್ದ ಸಂಪುಟ ರಚನೆ ಕಸರತ್ತು ಮುಗಿದಿದ್ದು, ನೂತನ ಸಚಿವರ ಕೊಠಡಿ ಸ್ವಚ್ಛತಾ ಕಾರ್ಯ ಮುಗಿದಿದೆ....

ಬೆಂಗಳೂರು: ಹಲವು ದಿನಗಳಿಂದ ನಡೆಯುತ್ತಿದ್ದ ಸಂಪುಟ ರಚನೆ ಕಸರತ್ತು ಮುಗಿದಿದ್ದು, ನೂತನ ಸಚಿವರ ಕೊಠಡಿ ಸ್ವಚ್ಛತಾ ಕಾರ್ಯ ಮುಗಿದಿದೆ.
ಇನ್ನೂ ಕೆಲವು ಸಚಿವರು ಮತ್ತವರ ಸಿಬ್ಬಂದಿ ಪ್ರವೇಶಿಸದ ಕೊಠಡಿಗಳನ್ನು ಕಾರ್ಮಿಕರು ಸ್ವಚ್ಚಗೊಳಿಸುತ್ತಿದ್ದಾರೆ. ಮತ್ತಲವು ಸಚಿವರ ಕೊಠಡಿಗಳಲ್ಲಿ  ಕಿಕ್ಕಿರಿದು ಅಭಿಮಾನಿಗಳು ಮತ್ತು ಕಾರ್ಯಕರ್ತರು ಸೇರಿದ್ದಾರೆ. ಹೂವಿನ ಹಾರ, ಬೊಕೆಟ್ಸ್ ತುಂಬಿ ತುಳುಕುತ್ತಿವೆ. ಸಚಿವರಾದ ನಂತರ ಅವರಿಗೆ ಅಭಿನಂದನೆ ಸಲ್ಲಿಸಲು  ದೂರದ ಊರಿನಿಂದ ಅಭಿಮಾನಿಗಳು ಆಗಮಿಸಿ ಅಭಿನಂದಿಸಿದ್ದಾರೆ.
ಖಾತೆ ಹಂಚಿಕೆ ನಂತರ ಕೆಲವು ಸಚಿವರು ಸೋಮವಾರದಿಂದ ಕೆಲಸ ಮಾಡಲು ಆರಂಭಿಸಿದ್ದಾರೆ, ಬಹುತೇಕ ಎಲ್ಲಾ  ಸಚಿವರು ಸೋಮವಾರ ಅಧಿಕಾರ ಸ್ವೀಕರಿಸಿ ಹಲವು ಸಭೆ ನಡೆಸಿದ್ದಾರೆ.
ಆರ್ ವಿ ದೇಶಪಾಂಡೆ, ಡಿ.ಕೆ ಶಿವಕುಮಾರ್ ಮುಂತಾದವರು, ಅಧಿಕಾರಿಗಳ ಜೊತೆ ಸಭೆ ನಡೆಸಿ ಮುಂದಿನ ನಡೆ ಅನುಸರಿಸುತ್ತಿದ್ದಾರೆ.
ಕಾರ್ಮಿಕ  ಸಚಿವ   ವೆಂಕಟರಮಣಪ್ಪ, ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಸೇರಿದಂತೆ ಕೆಲ ಸಚಿವರು ಮಧ್ಯಾಹ್ನ ಕಚೇರಿಗೆ ಆಗಮಿಸಿದರು, ಈ ವೇಳೆ ಕಚೇರಿಯ ಬಾಲಿ ಮುಂದೆ ತೆಂಗಿನಕಾಯಿ ಒಡೆಯಲಾಯಿತು. ಅರ್ಚಕರು ಕಚೇರಿಯೊಳಗೆ ಪೂಜೆ ಮಾಡಿ ಪ್ರಸಾದ ಹಂಚಿದರು. ಪೂಜೆ ನಂತರ  ಬೂದು ಗುಂಬಳಕಾಯಿ ಒಡೆದು ಶುಭ ಮುಹೂರ್ತದಲ್ಲಿ ಕಚೇರಿ ಪ್ರವೇಶಿಸಿದನ್ನು ಮರೆಯಲಿಲ್ಲ,  ಕೆ.ಜೆ ಜಾರ್ಜ್ ಸೇರಿದಂತೆ ಇನ್ನೂ ಹಲವು ಸಚಿವರು ಇನ್ನೂ ಕಚೇರಿ ಕಡೆ ತಲೆ ಹಾಕಲಿಲ್ಲ.                              

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ