ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ದೋಸ್ತಿಗಳ ನಡುವೆ ಭಿನ್ನಮತಕ್ಕೆ ಕಾರಣವಾದ ಬಜೆಟ್, ಸಿದ್ದರಾಮಯ್ಯ ಸಲಹೆಗೆ ಎಚ್ ಡಿಕೆ ತಿರಸ್ಕಾರ

2018-19ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ವಿಚಾರವಾಗಿ ರಾಜ್ಯದ ಸಮ್ಮಿಶ್ರ ಸರ್ಕಾರದ ಮುಖಂಡರ ನಡುವಿನ ಭಿನ್ನಾಭಿಪ್ರಾಯಗಳು ಹೊಗೆಯಾಡುತ್ತಿದೆ.

ದೋಸ್ತಿಗಳ ನಡುವೆ ಭಿನ್ನಮತಕ್ಕೆ ಕಾರಣಾದ ಬಜೆಟ್, ಸಿದ್ದರಾಮಯ್ಯ ಸಲಹೆಗೆ ಎಚ್ ಡಿಕೆ ತಿರಸ್ಕಾರ
Raghavendra Adiga
Updated On : 17 Jun 2018, 11:30 am
ಬೆಂಗಳೂರು :2018-19ನೇ ಸಾಲಿನ  ಪೂರ್ಣ ಪ್ರಮಾಣದ ಬಜೆಟ್ ಮಂಡನೆ ವಿಚಾರವಾಗಿ  ರಾಜ್ಯದ ಸಮ್ಮಿಶ್ರ ಸರ್ಕಾರದ ಮುಖಂಡರ ನಡುವಿನ ಭಿನ್ನಾಭಿಪ್ರಾಯಗಳು ಹೊಗೆಯಾಡುತ್ತಿದೆ.
ಹೊಸ ಬಜೆಟ್ ಅಗತ್ಯವಿಲ್ಲ ಪೂರಕ ಬಜೆಟ್ ಮಂಡನೆ ಮಾಡಲಿ ಎಂದು ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯ ಹೇಳಿದರೆ ಇದನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ  ಎಚ್. ಡಿ. ಕುಮಾರಸ್ವಾಮಿ ಹೊಸ ಸರ್ಕಾರದ ಯೋಜನೆಗಳ ಜಾರಿಗೆ ಹೊಸ ಬಜೆಟ್ ಆಗತ್ಯ ಎಂದಿದ್ದಾರೆ.
"ಚುನಾವಣೆಯಲ್ಲಿ ಒಂದೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೂ ನಾವು ಹೊಸ ಬಜೆಟ್ ಮಂಡನೆ ಮಾಡಲಿದ್ದೇವೆ ಎಂದು ನೀವು (ಸಿದ್ದರಾಮಯ್ಯ) ಚುನಾವಣೆ ಪೂರ್ವದಲ್ಲಿ ಹೇಳಿರುವುದು ನನಗೆ ಸ್ಪಷ್ಟವಾಗಿ ನೆನಪಿದೆ." ಎಂದಿರುವ ಕುಮಾರಸ್ವಾಮಿ ತಾನು ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಕ್ ಗಾಂಧಿ ಅವರನ್ನು ಭೇಟಿಯಾಗಿ ಮನವಿ ಮಾಡುವೆನು ಎಂದಿದ್ದಾರೆ.

Advertisement

Advertisement

ಶನಿವಾರ ಸುದ್ದಿಗಾರಒಡನೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ "ಫೆಬ್ರವರಿಯಲ್ಲಿ ನಾವು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದೇವೆ.ಅಲ್ಲದೆ ಅದರಲ್ಲಿ ಜುಲೈ ಅಂತ್ಯದವರೆಗಿನ ಲೇಖಾನುದಾನಕ್ಕೆ ಒಪ್ಪಿಗೆ ಪಡೆದಿದ್ದೇವೆ. ಹೀಗಿರಲು ಮತ್ತೆ ಪೂರ್ಣ ಬಜೆಟ್ ಮಂಡನೆ ಅಗತ್ಯವಿಲ್ಲ. ಕೇವಲ ಪೂರಕ ಬಜೆಟ್ ಮಂಡನೆ ಸಾಕು" ಎಂದಿದ್ದರು.
"ಸಂವಿಧಾನದ 205 ನೇ ವಿಧಿಯು ಪೂರಕ ಬಜೆಟ್ ಗೆ ಅವಕಾಶ ನೀಡುತ್ತದೆ. ಹೊಸ ಸರ್ಕಾರದಲ್ಲಿ ಕುಮಾರಸ್ವಾಮಿ ತಾವೇನಾದರೂ ಹೊಸ ಯೋಜನೆ, ಕಾರ್ಯಕ್ರಮ ಘೋಷಣೆ ಮಾಡಬೇಕೆಂದು ಅಂದುಕೊಂಡಲ್ಲಿ ಈ ಪೂರಕ ಬಜೆಟ್ ಮೂಲಕ ಮಾಡಬಹುದು"ಒಂದು ವೇಳೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಬೇಕೆಂದಾದರೆ ಪೂರಕ ಬಜೆಟ್ ಗೆ ಅವಕಾಶ ಕಲ್ಪಿಸುವ ಅಗತ್ಯವೇನು?" ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಯಿಸಿರುವ ಕುಮಾರಸ್ವಾಮಿ "ನಾವು ಇದನ್ನು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಿದ್ದೇವೆ.ಹೊಸ ಸರ್ಕಾರದ ಗುರಿ ಏನಿದೆ ಎನ್ನುವುದನ್ನು ತೋರಿಸಬೇಕಿದೆ. ಸರ್ಕಾರದ ಮುಂದೆ ಸಾಕಷ್ಟು ಸವಾಲುಗಳಿರುವುದರಿಂದ ಪೂರಕ ಬಜೆಟ್ ನ ಮಿತಿಗೆ ನಾವು ಒಳಪಡಲು ಸಾಧ್ಯವಿಲ್ಲ"
ಕಾಂಗ್ರೆಸ್ ಮತ್ತು ಜೆಡಿ (ಎಸ್) ಹಲವಾರು ಕಾರ್ಯಕ್ರಮಗಳನ್ನು ಚುನಾವಣೆಗೆ ಮುನ್ನ ಘೋಷಿಸಿದೆ, ಚುನಾವಣೆ ಬಳಿಕವೂ ಸಾಕಷ್ಟು ನೂತನ ಕಾರ್ಯಕ್ರಮಗಳನ್ನು ಸೇರ್ಪಡಿಸಲಾಗಿದೆ.ಹೀಗಾಗಿ ಪೂರಕ ಬಜೆಟ್ ಮಂಡನೆ ಮಾಡಿದಲ್ಲಿ ಎಲ್ಲವನ್ನೂ ಅಳವಡಿಸಿಕೊಳ್ಳುವ ಅವಕಾಶ ಸಿಗದು" ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ತನ್ನ ಅಧಿಕಾರಾವಧಿ ಪೂರ್ಣಗೊಳಿಸುವುದಕ್ಕೆ ಸುಮಾರು ಎರಡು ತಿಂಗಳಿರುವಾಗ ಫೆಬ್ರವರಿಯಲ್ಲಿ 2.1 ಲಕ್ಷ ಕೋಟಿ ರೂ ಮೊತ್ತದ ವಾರ್ಷಿಕ ಬಜೆಟ್ ಮಂಡನೆಯಾಗಿತ್ತು. ಆದರೆ ಇದೀಗ ಕುಮಾರಸ್ವಾಮಿ ಮತ್ತೆ ತಾವು ನೂತನ ಸರ್ಕಾರದ ಬಜೆಟ್ ಮಂಡನೆಗೆ ಮುಂದಾಗಿದ್ದಾರೆ. 
ಅವರನ್ನೇ ಕೇಳಿ
ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಯಿಸಿರುವ ಸಿದ್ದರಾಮಯ್ಯ "ಅವರೇಕೆ ಹಾಗೆನ್ನುತ್ತಾರೆ ನನಗೆ ತಿಳಿದಿಲ್ಲ, ನಾನದನ್ನು ಅರ್ಥೈಸಿಕೊಳ್ಳುವ ಗೋಜಿಗೆ ಹೋಗಲಾರೆ. ಅದರ ಸಂಬಧ ಏನಿದ್ದರೂ ಕುಮಾರಸ್ವಾಮಿ ಅವರನ್ನೇ ಕೇಳಿಕೊಳ್ಳಿ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments