ರಾಜ್ಯ

ಎಸ್ ಎಸ್ ಎಲ್ ಸಿ ಪರೀಕ್ಷೆ : ಮದರಾಸಗಳಿಂದ ವಿದ್ಯಾರ್ಥಿಗಳಿಗೆ ವಿನಾಯಿತಿ

Nagaraja AB

ಮಂಗಳೂರು: ಈ ಬಾರಿಯ ಎಸ್ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮದರಾಸಗಳಲ್ಲಿನ ಎರಡು ಗಂಟೆ ಅವಧಿಯ ಧಾರ್ಮಿಕ ಶಿಕ್ಷಣಕ್ಕೆ ಹಾಜರಾಗದಿರಲು ವಿನಾಯಿತಿ ನೀಡಲಾಗಿದೆ.

ಮಾರ್ಚ್ 23ರಿಂದ ಪರೀಕ್ಷೆ ಆರಂಭವಾಗಲಿದ್ದು, ಪರೀಕ್ಷೆ ಕಡೆಗೆ ಹೆಚ್ಚಿನ ಗಮನ ಕೇಂದ್ರಿಕರಿಸುವ ದೃಷ್ಟಿಯಿಂದ 600 ಮದರಸಗಳಲ್ಲಿ ಈ ವಿನಾಯಿತಿ ನೀಡಲಾಗಿದೆ.

ಉಳಿದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಉತ್ತೀರ್ಣರಾಗುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ. ಇದನ್ನು ಗಮನದಲ್ಲಿಸಿರಿಕೊಂಡು ಜನವರಿಯಿಂದಲೇ ಮೂರು ತಿಂಗಳ ವಿನಾಯಿತಿ ನೀಡಲಾಗಿದೆ.

ಕಳೆದ ವರ್ಷ ಒಟ್ಟಾರೇ  ಫಲಿತಾಂಶ ಶೇ.82.7 ರಷ್ಟಿದ್ದರೆ, ಮುಸ್ಲಿಂ ವಿದ್ಯಾರ್ಥಿಗಳ ಉತ್ತೀರ್ಣ ಸಂಖ್ಯೆ ಕೇವಲ ಶೇ.58 ರಷ್ಟಿತ್ತು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಅಮೀದ್ ಹೇಳುತ್ತಾರೆ.

ಮುಸ್ಲಿಂ ಬಾಹ್ಯುಳವಿರುವ ಉಲ್ಲಾಳ್, ಕಟಿಪಲ್ಲಾ, ಬಂಟ್ವಾಳ ಮೊದಲಾದ ಸರ್ಕಾರಿ ಶಾಲೆಗಳ ಮೇಲೆ ಈ ಫಲಿತಾಂಶ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಮದರಾಸಗಳಿಂದ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಆರ್. ರವಿ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಫಲಿತಾಂಶ ಕಡಿಮೆ ಪ್ರಮಾಣದಲ್ಲಿದೆ. ಈ ಬಗ್ಗೆ ಅರಿವು  ಮೂಡಿಸಲಾಗುತ್ತಿದೆ, ಯಾವುದೇ ವಿವಾದವಿಲ್ಲ ಎಂದರು.

SCROLL FOR NEXT