ಬೆಂಗಳೂರಿನಲ್ಲಿ ನಡೆದ ಸ್ವಚಾತಾ ವಿಚಾರ ಸಂಕಿರಣದಲ್ಲಿ ಹರ್ದೀಪ್ ಸಿಂಗ್ ಪುರಿ
ಬೆಂಗಳೂರು: ಅಕ್ಟೋಬರ್ 2019 ರ ಹೊತ್ತಿಗೆ ದೇಶವನ್ನು ಬಯಲು ಶೌಚ ಮುಕ್ತವನ್ನಾಗಿಸುವ ಕೇಂದ್ರ ಸರಕಾರದ ಉದ್ದೇಶವು ಇದಕ್ಕೂ ಮುನ್ನವೇ ಸಾಕಾರವಾಗಲಿದೆ ಎಂಡು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು. ಬೆಂಗಳೂರಿನಲ್ಲಿ ನಡೆದ ಸ್ವಚ್ಚತಾ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಮಾರ್ಚ್ 14, 2018ರ ದಾಖಲೆಯ ಅನುಸಾರ ದೇಶಾದ್ಯಂತ 1,867 ನಗರಗಳು / ನಗರ ಸ್ಥಳೀಯ ಸಂಸ್ಥೆಗಳು ಬಯಲು ಶೌಚ ಮುಕ್ತವಾಗಿದೆ. ಎಂದು ಪ್ರಮಾಣೀಕರಿಸಲ್ಪಟ್ಟಿದೆ. ಇನ್ನು ನಿಗದಿತ ಅವಧಿಯೊಳಗೆ ದೇಶ ಸಂಪೂರ್ನವಾಗಿ ಬಯಲು ಶೌಚ ಮುಕ್ತವಾಗಲಿದೆ ಎನ್ನುವ ಭರವಸೆ ಸರ್ಕಾರಕ್ಕಿದೆ.ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನವಾದ ಅಕ್ಟೋಬರ್ 2, 2019 ರೊಳಗೆ ದೇಶ ಬಯಲು ಶೌಚ ಮುಕ್ತವಾಗಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಗುರಿ. ಇದಾಗಲೇ "ಹತ್ತು ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಬಯಲು ಶೌಚ ಮುಕ್ತವಾಗಿದೆ. ಇನ್ನೂ ಎರಡು ರಾಜ್ಯಗಳು ಈ ನಿತ್ಟಿನಲ್ಲಿ ಸಾಧಿಸಲು ಮುನ್ನಡೆಯಲ್ಲಿದೆ.ಎಂದು ಅವರು ಹೇಳಿದ್ದಾರೆ.
ಕರ್ನಾಟಕ ರಾಜ್ಯದ ಹೆಸರು ಪ್ರಸ್ತುತ ಪಟ್ಟಿಯಲ್ಲಿಲ್ಲದೆ ಹೋದರೂ ಅಕ್ಟೋಬರ್ 2018ರ ವೇಳೆಗೆ ರಾಜ್ಯವನ್ನು ಬಯಲು ಶೌಚ ಮುಕ್ತವಾಗಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಸಾರ್ವಜನಿಕರ ಪಾಲ್ಗೊಳ್ಳುವಿಕೆಯೊಡನೆ ಸ್ವಚ್ಚ ಭಾರತ ಮಿಷನ್ ಸಾಕಷ್ಟು ಪ್ರಗತಿ ಸಾಧಿಸಿದೆ. ಜನರ ನೈರ್ಮಲ್ಯ ಕುರಿತ ಧೋರಣೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ.
ಸ್ಮಾರ್ಟ್ ಸಿಟಿ ಕುರಿತಂತೆ ಮಾತನಾಡಿದ ಸಚಿವರು ಪ್ರಪಂಚದ ಇತರ ಭಾಗಗಳಿಗೆ ಹೋಲಿಸಿದರೆ ನಮ್ಮಲ್ಲಿ ಈ ಯೋಜನೆ ವೇಗವಾಗಿ ಕಾರ್ಯಗತಗೊಳ್ಳುತ್ತಿದೆ. 2030 ರ ಹೊತ್ತಿಗೆ, ಜನಸಂಖ್ಯೆಯ 40% (60 ಕೋಟಿ) ಮೆಟ್ರೋಪಾಲಿಟನ್ ನಗರಗಳು / ನಗರ ಪ್ರದೇಶಗಳಲ್ಲಿ ವಾಸ ಮಾಡಲು ತೊಡಗಿರುತ್ತಾರೆ ಎಂದು ವರದಿಯಾಗಿದೆ "ಜನರು ತಮ್ಮ ಆರ್ಥಿಕ ಬೆಳವಣಿಗೆಗಾಗಿ ನಗರಗಳಿಗೆ ವಲಸೆ ಹೋಗುತ್ತಾರೆ ಎನ್ನುವುದನ್ನು ನಾವು ಅಲ್ಲಗೆಳೆಯಲಾಗುವುದಿಲ್ಲ. ನಾವು ಉತ್ತಮ ಮೂಲಸೌಕರ್ಯವನ್ನು ಒದಗಿಸಬೇಕಾಗಿದೆ ಮತ್ತು ಅದೇ ಸಮಯದಲ್ಲಿ ನಗರವನ್ನು ಚೆಂದಗಾಣಿಸಬೇಕಾದ ಉಪಕ್ರಮಗಳು ಸಹ ಜಾರಿಗೊಳಿಸಬೇಕು" ಎಂದರು.
"ಕಳೆದ 67 ವರ್ಷಗಳಿಂದ ನಗರಗಳನ್ನು ನಿರ್ಲಕ್ಷಿಸಲಾಗಿತ್ತು ಎನ್ನುವುದು ನನ್ನ ವೈಯುಕ್ತಿಕ ಭಾವನೆ, ಆದರೆ ನಮ್ಮ ಸರ್ಕಾರ ಬಂದ ನಂತರದಲ್ಲಿ ನಗರದ ಸ್ಥಳಗಳನ್ನು ಹೆಚ್ಚು ಪ್ರಯೋಜನಕಾರಿಯಾಗಿ ಮಾಡಲು ಉದ್ದೇಶಿಸಿದ್ದೇವೆ. ಇದಕ್ಕಾಗಿ ಕೇವಲ ಸರ್ಕಾರವಷ್ಟೇ ಅಲ್ಲ ಖಾಸಗಿ ಸಂಸ್ಥೆಗಳು, ಸಾರ್ವಜನಿಕರೂ ಪಾಲ್ಗೊಳ್ಳಬೇಕಾದದ್ದು ಅಗತ್ಯವಿದೆ " ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯನ್ನು ಟೀಕಿಸುತ್ತಾ ಸಿಂಗ್ ಹೇಳಿದರು. ಇದಾಗಲೇ ಘೋಷಿಸಲ್ಪಟ್ಟ ಎಲ್ಲಾ 99 ಸ್ಮಾರ್ಟ್ ನಗರಗಳ ಯೋಜನಾ ವ್ಯವಸ್ಥಾಪಕರನ್ನು ನಾವು ನೇಮಕ ಮಾಡಿದ್ದು ಈ ಸಂಬಂಧ ಹೆಚ್ಚಿನ ವಿಚಾರಗಳನ್ನು ಚರ್ಚಿಸಲು ಮತ್ತು ಹಂಚಿಕೊಳ್ಳಲು ಏಪ್ರಿಲ್ ನಲ್ಲಿ ಸಭೆ ಸೇರಲಿದ್ದೇವೆ." ಅವರು ಹೇಳಿದರು.
ಕನ್ನಡ ಕಲಿಯಲಿಲ್ಲ ಎಂದು ವಿಷಾದ
ಕರ್ನಾಟಕದ ಅವರ ಸಹೋದ್ಯೋಗಿಗಳನ್ನು ನೆನೆಸಿಕೊಂಡ ಹರ್ದೀಪ್ ಸಿಂಗ್ ಪುರಿ 1975ರಲ್ಲಿ ಲಕ್ಷ್ಮಿ ಪುರಿಯವರನ್ನು ವಿವಾಹವಾದಂದಿನಿಂದ ಕರ್ನಾಟಕದೊಡನೆ ನನ್ನ ಸಂಬಂಧ ಆಳವಾಗಿ ಬೇರೂರಿದೆ. ಅವರು ಬೆಂಗಳೂರಿನವರು. ಆದರೆ ನಾನು ನನ್ನ ಕೆಲಸದಲ್ಲಿ ಸದಾ ತೊಡಗಿದ್ದ ಕಾರಣ ಕನ್ನಡ ಕಲಿಯಲಾಗಲಿಲ್ಲ. ಇದಕ್ಕಾಗಿ ವಿಷಾದವಿದೆ ಎಂದು ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics