ರಾಜ್ಯ

ಮೊಹಮ್ಮದ್ ನಲಪಾಡ್ ನ್ಯಾಯಾಂಗ ಬಂಧನ ಏಪ್ರಿಲ್ 4ರವರೆಗೆ ವಿಸ್ತರಣೆ

Vishwanath S
ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಬಂಧನಕ್ಕೀಡಾಗಿರುವ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನ್ಯಾಯಾಂಗ ಬಂಧನ ಅವಧಿಯನ್ನು ಏಪ್ರಿಲ್ 4ರವರೆಗೂ ವಿಸ್ತರಣೆ ಮಾಡಲಾಗಿದೆ.
ನಲಪಾಡ್ ನ್ಯಾಯಾಂಗ ಬಂಧನ ಇಂದಿಗೆ ಮುಕ್ತಾಯವಾದ ಹಿನ್ನಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮೊಹಮ್ಮದ್ ನಲಪಾಡ್ ನನ್ನು ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ಕಲಾಪಕ್ಕೆ ಹಾಜರುಪಡಿಸಿದ್ದರು. 
ಈ ವೇಳೆ ನಲಪಾಡ್ ಪರ, ಮತ್ತು ವಿದ್ವತ್ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ನಲಪಾಡ್ ನ್ಯಾಯಾಂಗ ಬಂಧನ ಅವಧಿಯನ್ನು 14 ದಿನಗಳ ಅಂದರೆ ಏಪ್ರಿಲ್ 4ರವರೆಗೂ ವಿಸ್ತರಣೆ ಮಾಡಿದ್ದಾರೆ. 
ಇದಕ್ಕೂ ಮೊದಲು ವಿದ್ವತ್ ಪರ ವಾದ ಮಂಡಿಸಿದ್ದ ವಕೀಲರು ನಲಪಾಡ್ ಜಾಮೀನು ಅರ್ಜಿ ವಿರೋಧ ವ್ಯಕ್ತಪಡಿಸಿದ್ದರು. ಅಂತೆಯೇ ನಲಪಾಡ್ ವಿರುದ್ಧ ಸಾಕ್ಷ್ಯ ನಾಶ ಆತಂಕ ವ್ಯಕ್ತಪಡಿಸಿದ್ದ ವಿದ್ವತ್ ಪರ ವಕೀಲರು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಹೇಳಿದ್ದರು.
ಕಳೆದ ಫೆಬ್ರವರಿ 17ರಂದು ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ಯು ಬಿ ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಎಲ್ಲಾ ಆರೋಪಿಗಳ ವಿರುದ್ಧ ಕೊಲೆ ಯತ್ನದ ಪ್ರರಕಣ ದಾಖಲಾಗಿದೆ. 
SCROLL FOR NEXT