ಭಾವನಾ 
ರಾಜ್ಯ

ಆಜಾನ್ ವೇಳೆ ಭಾಷಣ ನಿಲ್ಲಿಸಿದ್ದಕ್ಕೆ ವೇದಿಕೆಯಿಂದ ಹೊರ ನಡೆದ ನಟಿ, ಕಾಂಗ್ರೆಸ್ ಮುಖಂಡೆ ಭಾವನಾ

ಸ್ಯಾಂಡಲ್ವುಡ್ ನಟಿ, ಕೆಪಿಸಿಸಿ ಕಾರ್ಯದರ್ಶಿ ಭಾವನಾ ಅವರು ಆಜಾನ್ ವೇಳೆ ಭಾಷಣ ನಿಲ್ಲಿಸಿದ್ದಕ್ಕೆ ವೇದಿಕೆಯಿಂದ ಹೊರ ನಡೆದ ಘಟನೆ ವರದಿಯಾಗಿದೆ...

ಚಿತ್ರದುರ್ಗ: ಸ್ಯಾಂಡಲ್ವುಡ್ ನಟಿ, ಕೆಪಿಸಿಸಿ ಕಾರ್ಯದರ್ಶಿ ಭಾವನಾ ಅವರು ಆಜಾನ್ ವೇಳೆ ಭಾಷಣ ನಿಲ್ಲಿಸಿದ್ದಕ್ಕೆ ವೇದಿಕೆಯಿಂದ ಹೊರ ನಡೆದ ಘಟನೆ ವರದಿಯಾಗಿದೆ. 
ಚಿತ್ರದುರ್ಗದಲ್ಲಿ ನಡೆದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸ್ಥಳೀಯ ಮಹಿಳಾ ಮುಖಂಡೆ ಸಮಯ್ಯಾ ತಬ್ರೀಜ್ ಭಾಷಣ ಮಾಡುತ್ತಿದ್ದರು. ಈ ವೇಳೆ ಆಜಾನ್ ಕೂಗಿದ್ದರಿಂದ ತಬ್ರೀಜ್ ಭಾಷಣ ನಿಲ್ಲಿಸಿದ್ದಾರೆ. 
ಸಮಯ್ಯಾ ತಬ್ರೀಜ್ ನಡೆಯಿಂದ ಕೋಪಗೊಂಡ ಭಾವನಾ ಭಾಷಣ ಮುಂದುವರೆಸುಂತೆ ಸೂಚಿಸಿದರು. ಆಗ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾವನ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಬೇಸರಗೊಂಡ ಭಾವನಾ ಕೊರಳಿಗೆ ಹಾಕಿಕೊಂಡಿದ್ದ ಕಾಂಗ್ರೆಸ್ ಶಾಲನ್ನು ತೆಗೆದುಹಾಕಿ ಭಾಷಣ ನಿಲ್ಲಿಸಿದ ಸಮಯ್ಯಾ ಅವರನ್ನು ಬೈದು ಸಭೆಯಿಂದ ಹೊರ ನಡೆದರು. 
ಭಾವನಾ ಅವರ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ, ಸಿದ್ದರಾಮಯ್ಯ ಅವರೇ ಆಜಾನ್ ಮೊಳಗುವ ವೇಳೆ ಭಾಷಣ ನಿಲ್ಲಿಸುತ್ತಾರೆ, ಭಾವನಾ ಅವರೇನು ವಿಶೇಷವೇ ಎಂದು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!