ಬೆಂಗಳೂರು: ಬೆಂಗಳೂರು ನಗರದಲ್ಲಿ ನಡೆಯುವ ಐತಿಹಾಸಿಕ ಕರಗ ಉತ್ಸವಕ್ಕೆ ಇನ್ನು ಕೆಲವೇ ನಿಮಿಷಗಳು ಬಾಕಿ ಇದ್ದು, ಚಾಲನೆ ದೊರೆಯಲಿದೆ.
ಧರ್ಮರಾಯಸ್ವಾಮಿ ದೇವಾಲಯದಿಂದ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ, ಅಕ್ಕಿ ಪೇಟೆ, ಅರಳೆಪೇಟೆ, ತಿಗಳರ ಪೇಟೆ, ಕಬ್ಬನ್ ಪೇಟೆ, ದೊಡ್ಡಪೇಟೆ, ಕೆ.ಆರ್ ಮಾರ್ಕೆಟ್ ಮಾರ್ಗವಾಗಿ ಕರಗ ಉತ್ಸವ ಸಂಚರಿಸಲಿದ್ದು, ಕುಲ ಪುರೋಹಿತರ ಮನೆಯಲ್ಲಿ ವಿಶೇಷ ಪೂಜೆ ನಡೆಯಲಿದೆ. ಇದೇ ಮೊದಲ ಬಾರಿಗೆ ಮನು ಎಂಬುವವರು ಹೂವಿನ ಕರಗವನ್ನು ಹೊರಲಿದ್ದಾರೆ. ಕರಗ ಉತ್ಸವಕ್ಕೆ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಅಂತಿಮ ಸಿದ್ಧತೆ ನಡೆದಿದ್ದು, ಕರಗ ಸಂಚರಿಸುವ ಮಾರ್ಗಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ಏ.1 ರಂದು ಸೂರ್ಯೋದಯದ ವೇಳೆಗೆ ಕರಗ ಧರ್ಮರಾಯಸ್ವಾಮಿ ದೇವಾಲಯಕ್ಕೆ ವಾಪಸ್ಸಾಗಲಿದೆ.