ಮೈಸೂರು: ಮೈಸೂರಿನಲ್ಲಿ 30 ವರ್ಷದ ವ್ಯಕ್ತಿಯೊಬ್ಬನನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ.
ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಲಾಡೂ ಕೌಂಟರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಕೊಲೆಯಾದ ದುರ್ದೈವಿ, ಈತ, ವಾಜಮಂಗಲ ನಿವಾಸಿಯಾಗಿದ್ದಾನೆ.
ಆರೋಪಿಗಳು ಕಿರಣ್ ದೇಹವನ್ನು ಸುಡಲು ಯತ್ನಿಸಿದ್ದು, ಮೈಸೂರು-ಉತ್ತನಹಳ್ಳಿ ರಸ್ತೆಯಲ್ಲಿ ಶವ ಸಿಕ್ಕಿದೆ. ಕೆ.ಆರ್ ಪೊಲೀಸರು ಪ್ರಕರ ದಾಖಲಿಸಿಕೊಂಡಿದ್ದಾರೆ.