ವಿಧಾನಸಭೆ ಚುನಾವಣೆ: 3 ಲಕ್ಷ ದಾಟಿದ ನೋಟಾ ಮತದಾನ 
ರಾಜ್ಯ

ವಿಧಾನಸಭೆ ಚುನಾವಣೆ: 3 ಲಕ್ಷ ದಾಟಿದ ನೋಟಾ ಮತದಾನ

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚನೆಗಾಗಿ ಬೇಕಾದ ಸರಳ ಬಹುಮತ ಪಡೆಯುವಲ್ಲಿ ವಿಫಲಆಗಿದೆ.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚನೆಗಾಗಿ ಬೇಕಾದ ಸರಳ ಬಹುಮತ ಪಡೆಯುವಲ್ಲಿ ವಿಫಲ ಆಗಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಇತರರು ಸಹ ಬಹುಮತದ ಸನಿಹಕ್ಕೆ ಬರಲಿಲ್ಲ.  ಒಟ್ಟಾರೆ ಕರ್ನಾಟಕ ಇನ್ನೊಮ್ಮೆ ಅತಂತ್ರ ವಿಧಾನಸಭೆ ಕಾಣುವಂತಾಗಿದೆ.
ಇಂತಹಾ ಅತಂತ್ರ ವಿಧಾನಸಭೆಗೆ ಕಾರಣಗಳು ಹಲವಾರು ಇದ್ದು ಇದರಲ್ಲಿ ನೋಟಾ ಮತದಾನದ ಪ್ರಮಾಣವೂ ಒಂದು.ರಾಜ್ಯದ ಒಟ್ಟಾರೆ  3 ಲಕ್ಷಕ್ಕೂ ಹೆಚ್ಚಿನ ಜನತೆ ನೋಟಾ ಚಲಾವಣೆ ಮಾಡಿದ್ದಾರೆ. ಈ ಮೂಲಕ ತಮ್ಮ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ. ಇದು ಫಲಿತಾಂಶದಲ್ಲಿ ಏರುಪೇರಾಗಲು ಕಾರಣವೆನ್ನಬಹುದು.
ನೋಟಾ ಚಲಾವಣೆಗೆ ಅವಕಾಶವಿಲ್ಲದೆ ಹೋಗಿದ್ದಲ್ಲಿ ಚುನಾವಣಾ ಫಲಿತಾಂಶ ಬೇರೆಯದೇ ರೀತಿಯಲ್ಲಿರುತ್ತಿತ್ತು.ಆದರೆ ಒಟ್ಟಾರೆ ಮತ ಚಲಾವಣೆಯಲ್ಲಿ ಶೇ. 0.9ರಷ್ಟು ಮತಗಳು ನೋಟಾ ಪಾಲಾಗಿದೆ. ಇದು ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿದೆ. 
ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಇತರರ ಬಳಿಕ ಫಲಿತಾಂಶ ಪಟ್ಟಿಯಲ್ಲಿ ನೋಟಾ ಐದನೇ ಸ್ಥಾನ ಗಳಿಸಿದೆ. ಹೀಗಾಗಿ ರಾಜ್ಯದಲ್ಲಿನ ಅತಂತ್ರ ಚುನಾವಣೆ ಫಲಿತಾಂಶಕ್ಕೆ ನೋಟಾ ಕೊಡುಗೆಯನ್ನೂ ಸಹ ಪರಿಗಣಿಸಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಹಿಮಾಚಲದಲ್ಲಿ ಭಾರಿ ಭೂಕುಸಿತ: ಬಸ್‌ ಮೇಲೆಯೇ ಬಿದ್ದ ಪರ್ವತ; ಕನಿಷ್ಠ 18 ಮಂದಿ ಸಾವು

ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣ: ಹಿರಿಯ ಅಧಿಕಾರಿ ಅಮಾನತು

BiggBoss Kannada: ಜಾಲಿವುಡ್​ ಸ್ಟುಡಿಯೋಸ್​ಗೆ ಬೀಗ; ಮನೆಯಿಂದ ಹೊರಬಂದ ಬಿಗ್‌ಬಾಸ್‌ ಸ್ಪರ್ಧಿಗಳು ಹೋಗಿದ್ದೇಲ್ಲಿಗೆ?

ಥಿಯೇಟರ್ ಹಾಗೂ ರಸ್ತೆಗಳಲ್ಲಿ ದೈವದ ಅನುಕರಣೆ ಮಾಡಬೇಡಿ: ಪ್ರೇಕ್ಷಕರಲ್ಲಿ ಕಾಂತಾರ: ಅಧ್ಯಾಯ 1 ಚಿತ್ರತಂಡ ಮನವಿ!

ಸುಪ್ರೀಂಕೋರ್ಟ್ ನಲ್ಲಿ ತಮ್ಮತ್ತ ಶೂ ಎಸೆದಿದ್ದವನಿಗೆ ಕ್ಷಮೆ ನೀಡಿದ CJI

SCROLL FOR NEXT