ಸಾಂದರ್ಭಿಕ ಚಿತ್ರ 
ರಾಜ್ಯ

ವಿಜಯಪುರ: ಅತ್ಯಾಚಾರಕ್ಕೀಡಾದ ತಂಗಿಗೆ ನ್ಯಾಯ ದೊರಕಿಸಲು ಸೇನಾ ಯೋಧ ಅಣ್ಣನ ಹೋರಾಟ

ತನ್ನ 20 ವರ್ಷದ ಸಹೋದರಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಶಿಕ್ಷೆ ನೀಡಿ ತನಗೆ ನ್ಯಾಯ...

ವಿಜಯಪುರ: ತನ್ನ 20 ವರ್ಷದ ಸಹೋದರಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಶಿಕ್ಷೆ ನೀಡಿ ತನಗೆ ನ್ಯಾಯ ಸಿಗಲು 30 ವರ್ಷದ ಸೇನಾ ಯೋಧ ಹೋರಾಡುತ್ತಿರುವ ಘಟನೆ ಜಿಲ್ಲೆಯ ಮುದ್ದೆಬಿಹಾಳ ತಾಲ್ಲೂಕಿನಲ್ಲಿ ನಡೆದಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಸೇನಾ ಯೋಧ, ನನ್ನ ತಂಗಿಯನ್ನು ಮುದ್ದೆಬಿಹಾಳ ಕಾಲೇಜಿಗೆ 2015ರಲ್ಲಿ ಪಿಯುಸಿಗೆ ಸೇರಿಸಲಾಗಿತ್ತು. ಆಕೆಯ ಮೇಲೆ ಆಂಧ್ರ ಪ್ರದೇಶದ ನಿವಾಸಿ ರಾಂಬಾಬು ಬಿ ಅನಿಂಗೊನಿ ಸತತ ಒಂದು ವರ್ಷಕ್ಕೂ ಹೆಚ್ಚು ಕಾಲ ಅತ್ಯಾಚಾರ ನಡೆಸಿದ್ದಾನೆ. ಈತ ಸ್ಥಳೀಯ ಬಾರ್ ಅಂಗಡಿಯ ಮಾಲಿಕ.

ರಾಂಬಾಬು ಆಕೆಗೆ ಮನೆಯಲ್ಲಿ ಮತ್ತು ಸ್ನೇಹಿತರಿಗೆ ವಿಷಯ ತಿಳಿಸದಂತೆ ಬೆದರಿಕೆ ಕೂಡ ಹಾಕಿದ್ದ. ತೊಂದರೆ ಸಹಿಸಲಾಗದೆ ನನ್ನ ತಂಗಿ ಮನೆಯಲ್ಲಿ ಹೆತ್ತವರಿಗೆ ವಿಷಯ ತಿಳಿಸಿದ್ದಾಳೆ. ವಿಷಯ ಹೊರಗೆ ಗೊತ್ತಾದರೆ ಮರ್ಯಾದೆಗೆ ಧಕ್ಕೆಯುಂಟಾಗಬಹುದು ಎಂದು ಪೊಲೀಸರಿಗೆ ದೂರು ನೀಡಲು ನನ್ನ ಪೋಷಕರು ಹಿಂದೇಟು ಹಾಕಿದರು ಎನ್ನುತ್ತಾರೆ ಸೇನಾ ಯೋಧ.

ಅಸ್ಸಾಂನಲ್ಲಿ ಸೇನಾ ಕಾರ್ಯನಿರತನಾಗಿದ್ದ ಯೋಧ ಕಳೆದ ಬೇಸಿಗೆ ರಜೆಯಲ್ಲಿ ಊರಿಗೆ ಬಂದಿದ್ದರಂತೆ. ತನ್ನ ಸೋದರಿ ಮೇಲೆ ಲೈಂಗಿಕ ಹಲ್ಲೆ ನಡೆಸುವಾಗ ಯೋಧನಿಗೆ ರಾಂಬಾಬು ಸಿಕ್ಕಿಬಿದ್ದಿದ್ದಾನೆ. ಆಗ ಆತನಿಗೆ 19 ವರ್ಷ ವಯಸ್ಸು. ಯೋಧ ಅವನಿಗೆ ಚೆನ್ನಾಗಿ ಥಳಿಸಿ ಗ್ರಾಮದಲ್ಲಿ ಅರೆಬೆತ್ತಲೆ ಮಾಡಿ ಎಲ್ಲರ ಮುಂದೆ ನಿಲ್ಲಿಸಿದನು. ನಂತರ ಪೊಲೀಸರಿಗೆ ಒಪ್ಪಿಸಿದನು. ಆದರೆ ಪೊಲೀಸರು ಕೇಸು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದರು. ನಾಲ್ಕ ದಿನಗಳ ಕಾಲ ಯೋಧ ಪೊಲೀಸರನ್ನು ಮನವಿ ಮಾಡಿಕೊಂಡ ನಂತರ ಕಳೆದ ವರ್ಷ ಜೂನ್ 17ರಂದು ಕೇಸು ದಾಖಲಿಸಿಕೊಂಡರು. ರಾಂಬಾಬುಗೆ ಪೊಲೀಸರ ಪ್ರಭಾವ ಇದ್ದುದರಿಂದ ಪೊಲೀಸರು ಏನೂ ಕ್ರಮ ಕೈಗೊಳ್ಳದೆ ಅದೇ ದಿನ ಕಸ್ಟಡಿಯಿಂದ ಬಿಟ್ಟರು ಎನ್ನುತ್ತಾರೆ ಯೋಧರು.

ತೀವ್ರ ಹತಾಶೆಯಿಂದ ಯೋಧ ರಾಂಬಾಬುವಿನ ಮದ್ಯದಂಗಡಿ ಬಳಿ ಹೋಗಿ ತನ್ನ ತಂಗಿಯ ತಂಟೆಗೆ ಬರದಂತೆ ಎಚ್ಚರಿಕೆ ನೀಡಿದ್ದರು. ಆಗ ಅಲ್ಲಿ ರಾಂಬಾಬುವಿನ ಬೆಂಬಲಿಗರು ಸೇರಿದ್ದರು. ಅವರಿಂದ ರಕ್ಷಣೆ ಪಡೆಯಲು ಯೋಧ ತನ್ನ ಬಳಿಯಿದ್ದ ಪರವಾನಗಿ ಸೇನಾ ಪಿಸ್ತೂಲ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದರು. ಅದಕ್ಕೆ ರಾಂಬಾಬು ತನ್ನನ್ನು ಯೋಧ ಸಾಯಿಸಲು ಯತ್ನಿಸಿದ್ದ ಎಂದು ಆರೋಪಿಸಿದ್ದನು.

ಪೊಲೀಸರು ಯೋಧನನ್ನು ಬಂಧಿಸಿ ಪಿಸ್ತೂಲ್ ವಶಪಡಿಸಿಕೊಂಡು ಐಪಿಸಿ ಸೆಕ್ಷನ್ 307ರಡಿಯಲ್ಲಿ ಕೇಸು ದಾಖಲಿಸಿದ್ದರು. ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಸಮಯಕ್ಕೆ ಸರಿಯಾಗಿ ನಂತರ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಿಲಿಲ್ಲ. ಸೇನಾಧಿಕಾರಿಗಳು ಯೋಧನನ್ನು ಹುಡುಕಿಕೊಂಡು ಊರಿಗೆ ಬಂದಾಗ ಜೈಲಿನಲ್ಲಿದ್ದುದನ್ನು ನೋಡಿ ನಿಯಮ ಪ್ರಕಾರ ಜೈಲಿನಿಂದ ಬಿಡಿಸಿದರು. ಘಟನೆಗೆ ಸಂಬಂಧಪಟ್ಟಂತೆ ವಿಸ್ತೃತ ವರದಿಯನ್ನು ಪೊಲೀಸ್ ಅಧಿಕಾರಿಗಳಿಂದ ಕೇಳಿದರು.

ಈ ಘಟನೆ ನಡೆದ ನಂತರ ಮೂರು ಬಾರಿ ಊರಿಗೆ ಬಂದಿದ್ದಾಗ ಯೋಧ ಕೇಸು ಏನಾಯಿತೆಂದು ಪೊಲೀಸರ ಬಳಿ ಹೋಗಿ ವಿಚಾರಿಸಿದ್ದಾರೆ. ಆದರೆ ರಾಂಬಾಬು ಮತ್ತು ಪೊಲೀಸರ ನಡುವೆ ಹೊಂದಾಣಿಕೆ ಇದ್ದುದರಿಂದ ಏನೂ ಪ್ರಯೋಜನವಾಗಲಿಲ್ಲ. ಬೇಸರಗೊಂಡ ಯೋಧ ವಿಜಯಪುರ ಎಸ್ಪಿ ಕುಲದೀಪ್ ಕುಮಾರ್ ಜೈನ್ ನನ್ನು ಸಂಪರ್ಕಿಸಿದರು. ಅವರು ಪೊಲೀಸರ ಮತ್ತು ರಾಂಬಾಬು ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದರು. ಯೋಧ ಈ ಕುರಿತು ಪ್ರಧಾನಿಗೆ ಕೂಡ ಪತ್ರ ಬರೆದಿದ್ದಾರೆ.

ಇದಕ್ಕೆ ಪ್ರಧಾನ ಮಂತ್ರಿ ಕಾರ್ಯಾಲಯ ಉತ್ತರಿಸಿ ಕರ್ನಾಟಕ ಮುಖ್ಯ ಕಾರ್ಯದರ್ಶಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಮುಖ್ಯ ಕಾರ್ಯದರ್ಶಿಗಳು ವಿಜಯಪುರ ಎಸ್ಪಿಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಆದರೆ ಯೋಧನ ಪ್ರಯತ್ನ ಮಾತ್ರ  ಫಲ ನೀಡಲಿಲ್ಲ.
ಕಳೆದ ತಿಂಗಳು 19 ರಂದು ಯೋಧನ ರೆಜಿಮೆಂಟ್ ಎಸ್ಪಿಗೆ ಮತ್ತು ಜಿಲ್ಲಾಧಿಕಾರಿಗೆ ಪತ್ರ ಬರೆದು ವರದಿ ಕೇಳಿದ್ದಾರೆ. ಆದರೆ ಒಂದು ತಿಂಗಳು ಕಳೆದ ನಂತರವೂ ಪತ್ರ ಬರೆಯಲಿಲ್ಲ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಕೇಳಿದಾಗ ಎಸ್ಪಿ ಪ್ರಕಾಶ್ ನಿಕ್ಕಮ್, ನಾನು ಚುನಾವಣಾ ಕರ್ತವ್ಯದಲ್ಲಿ ಬ್ಯುಸಿಯಾಗಿದ್ದೆ. ನನಗೆ ಸೇನೆಯಿಂದ ಯಾವ ಪತ್ರ ಕೂಡ ಬರಲಿಲ್ಲ ಎಂದಿದ್ದಾರೆ. ಇನ್ನು ಈ ಕೇಸಿನ ಬಗ್ಗೆ ವಿಚಾರಣೆ ನಡೆಸಿ ಆದಷ್ಟು ಬೇಗ ಉತ್ತರ ನೀಡುವುದಾಗಿ ಮತ್ತು ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ದೇಶದ ಗಡಿಯನ್ನು ಕಾಪಾಡುವ ನಾವು ನಮ್ಮ ಕುಟುಂಬಸ್ಥರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದೇವೆ. ನಾನು ಈ ಕುರಿತು ಮುಖ್ಯಮಂತ್ರಿಗೆ, ಪ್ರಧಾನಿಗೆ ಎಲ್ಲರಿಗೂ ಪತ್ರ ಬರೆದಿದ್ದೇನೆ ಆದರೆ ಏನೂ ಪ್ರಯೋಜನವಾಗಿಲ್ಲ ಎಂದರು.

ಇದೀಗ ಸ್ಥಳೀಯ ಗ್ರಾಮಸ್ಥರು, ಮಹಿಳೆಯರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!