ರಾಜ್ಯ

ಸಿಎಂ ಯೋಗಿಗೆ ಸೆಡ್ಡು, ಬೆಂಗಳೂರು ರಸ್ತೆಗಳಿಗೆ ಮಸೀದಿ, ಮುಸ್ಲಿಮರ ಹೆಸರಿಡುವಂತೆ ಕಾರ್ಪೋರೇಟರ್ ಅರ್ಜಿ!

Srinivasamurthy VN
ಬೆಂಗಳೂರು: ಮತದಾರರ ಓಲೈಕೆಗಾಗಿ ರಾಜಕಾರಣಿಗಳು ಮಾಡದ ಕೆಲಸವಿಲ್ಲ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅಲ್ಪಸಂಖ್ಯಾತ ಮತದಾರರನ್ನು ಓಲೈಸಲು ಬಿಬಿಎಂಪಿ ಪಾಲಿಕೆ ಸದಸ್ಯರೊಬ್ಬರು ಬೆಂಗಳೂರಿನ ರಸ್ತೆಗಳಿಗೆ ಮುಸ್ಲಿಂ ಸಮುದಾಯ ಹೆಸರಿಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಉತ್ತರ ಪ್ರದೇಶದ ಯೋಗಿ ಅದಿತ್ಯನಾಥ್ ಸರ್ಕಾರ ಅಲಹಾಬಾದ್ ಬದಲು ಪ್ರಯಾಗ್ ರಾಜ್ ಹೆಸರನ್ನು ಮರುನಾಮಕರಣ ಮಾಡಿದ ಬೆನ್ನಲ್ಲೇ ಬೆಂಗಳೂರಿನ ಬಾಪೂಜಿ ನಗರದ ಬಿಬಿಎಂಪಿ ಪಾಲಿಕೆ ಸದಸ್ಯ ಅಜ್ಮಲ್ ಬೇಗ್ ಅವರು ನಗರದ ರಸ್ತೆಗಳಿಗೂ ಮುಸ್ಲಿಮರ ಹೆಸರನ್ನು ಇಡುವಂತೆ ಬಿಬಿಎಂಪಿಗೆ ಮನವಿ ಮಾಡಿಕೊಂಡಿದ್ದಾರೆ.
4 ತಿಂಗಳ ಹಿಂದೆಯೇ ಅಂದರೆ ಆಗಸ್ಟ್ 28ರಂದು ಅಜ್ಮಲ್ ಅವರು ಕೌನ್ಸಿಲ್ ಸಭೆಯಲ್ಲಿ ಈ ಪ್ರಸ್ತಾಪವನ್ನು ಇರಿಸಿದ್ದು, ಈಗ ತಡವಾಗಿ ಬೆಳಕಿಗೆ ಬಂದಿದೆ. ಯಾಕೆ ಮರುನಾಮಕರಣಕ್ಕೆ ಮುಂದಾಗಿದ್ದೀರಿ ಎಂದು ಪ್ರಶ್ನೆ ಕೇಳಿದ್ದಕ್ಕೆ ಸಮುದಾಯದವರು ಒತ್ತಾಯ ಮಾಡಿದ್ದಕ್ಕೆ ಅರ್ಜಿ ಸಲ್ಲಿಸಿದ್ದೇನೆ ವಿನಃ ನನ್ನ ಸ್ವಾರ್ಥಕ್ಕಾಗಿ ನಾನು ಅರ್ಜಿ ಸಲ್ಲಿಸಿಲ್ಲ ಎಂದು ಹೇಳಿದ್ದರು. 
ಯಾವ ರಸ್ತೆಗೆ ಯಾವ ಹೆಸರು?
ಖಾದ್ರಿ ಶಾಮಣ್ಣ ಅಂಡರ್ ಪಾಸ್ ನ ಪೈಪ್ ಲೈನ್ ರಸ್ತೆಗೆ ಗಫೂರ್ ರಸ್ತೆ, ಸುನ್ನಿ ಚೌಕದಿಂದ ಮೈಸೂರು ರಸ್ತೆವರೆಗಿನ ಪೈಪ್ ಲೈನ್ ರಸ್ತೆಗೆ ಸುಬಾನಿಯಾ ಮಸೀದಿ ಹೆಸರು, ಸಂತೋಷ್ ಟೆಂಟ್ ನಿಂದ ಶೋಭಾ ಟೆಂಟ್ ವರೆಗಿನ ರಸ್ತೆಗೆ ಜಾಮೀಯಾ ಮಸೀದಿ ಹೆಸರು, ಶಾಮಣ್ಣ ಗಾರ್ಡನ್ 6ನೇ ಕ್ರಾಸ್ ರಸೆಗೆ ಖುದಾದತ್ ಮಸೀದಿ ಹೆಸರು, ಬಾಪೂಜಿನಗರ 1ನೇ ಮುಖ್ಯ ರಸ್ತೆಗೆ ಹೀರಾ ಮಸೀದಿ ಎಂದು ನಾಮಕರಣ ಮಾಡುವಂತೆ ಬೇಗ್ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
SCROLL FOR NEXT