ರಾಜ್ಯ

ದೇವರು ಅನ್ಯಾಯ ಮಾಡಿಬಿಟ್ಟ: ಗೆಳೆಯನ ನೆನೆದು ಕಣ್ಣೀರು ಹಾಕಿದ ಪ್ರಹ್ಲಾದ್ ಜೋಶಿ

Shilpa D
ಬೆಂಗಳೂರು: ಕೇಂದ್ರ ಸಚಿವ ಅನಂತ ಕುಮಾರ್ ಇಂದು ನಸುಕಿನ ಜಾವ ಅನಾರೋಗ್ಯದಿಂದ ವಿಧಿವಶರಾಗಿದ್ದು, ದೇಶ ಹಾಗೂ ರಾಜ್ಯದ ಎಲ್ಲಾ ರಾಜಕೀಯ ನಾಯಕರು ಕಂಬನಿ ಮಿಡಿಯುತ್ತಿದ್ದಾರೆ.
ಅನಂತ್ ಕುಮಾರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಹ್ಲಾದ್ ಜೋಷಿ ದುಃಖತಪ್ತರಾದರು. ಅನಂತ್ ಜೀ ಇನ್ನಿಲ್ಲ ಅಂದಾಗ ನನಗೆ ಬಹಳ ದೊಡ್ಡ ಆಘಾತವೇ ಆಗಿದೆ. ಅವರೊಬ್ಬ ನನ್ನ ವೈಯಕ್ತಿಕ ಗೆಳೆಯ ಅಲ್ಲದೇ ಮಾರ್ಗದರ್ಶಕರಾಗಿಯೂ ಇದ್ದರು. ದೇವರ ಇಚ್ಛೆಗೆ ಉಪಾಯವಿಲ್ಲ ಅಂತ ಗದ್ಗದಿತರಾದ್ರು.
ಆರೋಗ್ಯದ ಬಗ್ಗೆ ತುಂಬಾ ಕಾಳಜಿ ಉಳ್ಳವರಾಗಿದ್ದ ಅನಂತ್ ಕುಮಾರ್ ಸಂಸತ್ ಕ್ಯಾಂಟೀನ್ ಊಟ ಮಾಡಲು ಬಿಡುತ್ತಿರಲಿಲ್ಲ. ಊಟ ನನ್ನ ಛೇಂಬರ್ ನಲ್ಲೇ ಬಂದು ಮಾಡಬೇಕು ಅಂತ ಹೇಳುತ್ತಿದ್ದರು. ಅಧಿವೇಶನದ ಸಂದರ್ಭದಲ್ಲಿ ಊಟಕ್ಕೆ ಅವರ ಮನೆಯಲ್ಲೇ ಮಾಡಲು ಬೈದು ಕರೆದುಕೊಂಡು ಹೋಗುತ್ತಿದ್ದರು. ಮತ್ತೊಂದು ಸಲ ನೀನು ಗೆಲ್ಲಬೇಕು. ನಿನ್ನ ಕ್ಷೇತ್ರದಲ್ಲಿ ಏನೇನು ಕೆಲಸ ಇದೆ ಅದನ್ನು ಈಗ ಮುಗಿಸಿಬಿಡು ಅಂತ ಹೇಳುತ್ತಿದ್ದರು. ಆದರೆ ಅಷ್ಟೊಂದು ಆರೋಗ್ಯದ ಬಗ್ಗೆ ಕಾಳಜಿ ಇದ್ದವರಿಗೆ ದೇವರ ಅನ್ಯಾಯ ಮಾಡಿಬಿಟ್ಟ ಎಂದು ಕಣ್ಣೀರು ಹಾಕಿದ್ದಾರೆ.
ನಮ್ಮ ತಂದೆ ಹಾಗೂ ಅವರ ತಂದೆ ಇಬ್ಬರೂ ರೈಲ್ವೆ ಇಲಾಖೆಯಲ್ಲಿದ್ದರು. 8ನೇ ತರಗತಿಯಿಂದಲೇ ನಾವು ಆತ್ಮೀಯರಾಗಿದ್ದೆವು, ನಾನು ಈ ಸ್ಥಾನಕ್ಕೆ ಬರಲು ಅವರೇ ಕಾರಣ,  ಸಹಾಯ ಬೇಡಿ ಬಂದವರನ್ನು ವಾಪಸ್ ಕಳುಹಿಸುತ್ತಿರಲಿಲ್ಲ,  ಅವರಂಥ ಹೃದಯ ವೈಶಾಲ್ಯತೆ ಇನ್ನೊಬ್ಬರಿಗೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
SCROLL FOR NEXT