ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಾವಿನ ಸುದ್ದಿ ತಿಳಿದು ಅವರ ಅಪ್ಪಟ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಹೊಟ್ಟೆ ಗೌಡನದೊಡ್ಡಿ ಗ್ರಾಮದ ತಮ್ಮಯ್ಯ(50) ನಿಡಘಟ್ಟ ಸಮೀಪದ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಂಬರೀಷ್ ಸಾವಿನ ಸುದ್ದಿ ಕೇಳಿ ವಿಚಲಿತರಾಗಿದ್ದರು. ತಮ್ಮಯ್ಯ ಕೈಯ್ಯಲ್ಲಿ ಅಂಬರೀಷ್ ಭಾವಚಿತ್ಪ ಹಿಡಿದು,ರೈಲು ಹಳಿ ಮೇಲೆ ಶವ ಸಿಕ್ಕಿದೆ,
ರೈತನಾಗಿದ್ದ ತಮ್ಮಯ್ಯ ಅಂಬರೀಷ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಅಂಬಿ ಟೀಮ್ ಎಂಬ ಹೆಸರಿನಲ್ಲಿ ಪ್ರತಿ ವರ್ಷ ಅಂಬರೀಷ್ ಅವರ ಹುಟ್ಟು ಹಬ್ಬ ಆಚರಿಸುತ್ತಿದ್ದರು. ಅಂಬರೀಶ್ ಸಾವಿನ ವಿಷಯ ಕೇಳಿದ ತಮ್ಮಯ್ಯ ವಿಚಿತ್ರವಾಗಿ ವರ್ತಿಸುತ್ತಿದ್ದರು. ಶನಿವಾರ ರಾತ್ರಿ ತಮ್ಮಯ್ಯ ಮನೆಗೆ ತೆರಳಿರಲಿಲ್ಲ, ಭಾನುವಾರ ಬೆಳಗ್ಗೆ 10.30ಕ್ಕೆ ಪ್ರಯಾಣಿಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ತಮ್ಮಯ್ಯ.ಅವರ ಕುಟುಂಬಸ್ಥರಿಗೆ ಸಿಎಂ ಕುಮಾರ ಸ್ವಾಮಿ ನೆರವು ನೀಡುವುದಾಗಿ ಘೋಷಿಸಿದ್ದಾರೆ ಎಂದು ತಾಲೂಕು ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸಿ.ಟಿ ಶಂಕರ್ ಹೇಳಿದ್ದಾರೆ.