ರಾಜ್ಯ

ಕೋರ್ಟ್ ತೀರ್ಪಿಗೆ ಸ್ವಾಗತ, ಆದರೆ ಶಬರಿಮಲೆ ದೇವಾಲಯದ ಆಚರಣೆ ಗೌರವಿಸುತ್ತೇನೆ: ಕಾಂಗ್ರೆಸ್ ನಾಯಕಿ ಕವಿತಾ ಸನಿಲ್

Srinivas Rao BV
ಮಂಗಳೂರು: ಶಬರಿಮಲೆ ದೇವಾಲಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ, ಆದರೆ ವೈಯಕ್ತಿಕವಾಗಿ ನಾನು ಶಬರಿಮಲೆ ದೇವಾಲಯದ ಪಾವಿತ್ರ್ಯತೆಗೆ ಗೌರವ ನೀಡುತ್ತೇನೆ. ದೇವಾಲಯದ ಆಚರಣೆಗೆ ತಕ್ಕಂತೆ ನಡೆದುಕೊಳ್ಳುತ್ತೇನೆ ಎಂದು ಮಂಗಳೂರಿನ ಮಾಜಿ ಮೇಯರ್, ಕಾಂಗ್ರೆಸ್ ನಾಯಕಿ ಕವಿತಾ ಸನಿಲ್ ಹೇಳಿದ್ದಾರೆ. 
ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ಸುಪ್ರೀಂ ಕೋರ್ಟ್ ತೀರ್ಪಿಗೆ ನಾನು ತಲೆ ಬಾಗುತ್ತೇನೆ, ಆದರೆ ಮಧ್ಯವಯಸ್ಸಿನ ಮಹಿಳೆಯರು ಮಾತ್ರ ಹೋಗಬಾರದು ಎಂಬ ಅಂಶವನ್ನು  ಹಿಂದೂ ಧರ್ಮದ ಓರ್ವ ಮಹಿಳೆಯಾಗಿ, ದೇವಾಲಯದ ಪಾವಿತ್ರ್ಯತೆಗೆ ಗೌರವ ನೀಡುತ್ತೇನೆ ಶಬರಿಮಲೆ ದೇವಾಲಯ ಬೇರೆ ದೇವಾಲಯಗಳಂತೆ ಅಲ್ಲ. ಅದಕ್ಕೆ ಅದರದ್ದೇ ಆದ ಗೌರವ ಪಾವಿತ್ರ್ಯತೆ ಸಂಪ್ರದಾಯಗಳಿವೆ, ವೈಯಕ್ತಿಕವಾಗಿ ನಾನು ಅವುಗಳನ್ನು ಪಾಲಿಸುತ್ತೇನೆ.  ನನಗೂ ಶಬರಿಮಲೆ ದೇವಾಲಯಕ್ಕೆ ಹೋಗಬೇಕೆಂಬ ಆಸೆ ಇದೆ. ಆದರೆ ಈಗ ಹೋಗುವುದಿಲ್ಲ ಹೋಗುವ ಅವಕಾಶ ಸ್ವಾಭಾವಿಕವಾಗಿ ಸಿಕ್ಕಿದಾಗ ಹೋಗುತ್ತೇನೆ" ಎಂದು ಹೇಳ್ದಿದಾರೆ.   
ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶವನ್ನು ಸುಪ್ರ‍ೀಂ ಕೋರ್ಟ್ ಆದೇಶ ದೊರಕಿಸಿಕೊಟ್ಟಿರಬಹುದು, ಆದರೆ ಆಚರಣೆ, ಪಾವಿತ್ರ್ಯತೆಗಳನ್ನು ಕಾಪಾಡುವುದರ ಬಗ್ಗೆ ಹಿಂದೂ ಧರ್ಮದ ಮಹಿಳೆಯರು ಯೋಚನೆ ಮಾಡಬೇಕಿದೆ ಎಂದು ಕವಿತಾ ಸನಿಲ್ ಹೇಳಿದ್ದಾರೆ.
SCROLL FOR NEXT