ಬೆಂಗಳೂರು: ಬೌದ್ಧ ಧರ್ಮಗುರು ದಲೈಲಾಮಾ ಅವರ ಹತ್ಯೆ ಸಂಚಿನಲ್ಲಿ ಕರ್ನಾಟಕದ ನಂಟು ಇರುವ ಸ್ಫೋಟ ಮಾಹಿತಿಯೊಂದರನ್ನು ರಾಷ್ಟ್ರೀಯ ತನಿಖಾ ದಳ ಬಹಿರಂಗಪಡಿಸಿದೆ.
ಕಳೆದ ಆಗಸ್ಟ್ 6 ಹಾಗೂ 8 ರಂದು ಕರ್ನಾಟಕಗ ರಾಮನಗರ ಹಾಗೂ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ಬಾಂಗ್ಲಾದೇಶ ಮೂಲಕ ಜಮಾತ್ ಉಲ್ ಮುಜಾಹಿದ್ದೀನ್ (ಜೆಎಂಬಿ) ಬಾಂಗ್ಲಾದೇಶ ಉಗ್ರ ಸಂಘಟನೆಯ ಶಂಕಿತ ಉಗ್ರರಾದ ಮೊಹಮ್ಮದ್ ಜಹೀದುಲ್ ಇಸ್ಲಾಂ ಕೌಸರ್ ಅಲಿಯಾಸ್ ಮುನೀರ್ ಹಾಗೂ ಆದಿಲ್ ಹುಸೇನ್ ಅಲಿಯಾಸ್ ಅಸಾದುಲ್ಲಾ ಅವರು ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಎನ್ಐಎ ತಿಳಿಸಿದೆ.
ಈ ಕುರಿತಂತೆ ಸೆ.27 ರಂದು ಎನ್ಐಎ ಅಧಿಕಾರಿಗಳು ಪಾಟ್ನಾದ ವಿಶೇಷ ಎನ್ಐಎ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದು, ಪಟ್ಟಿಯಲ್ಲಿ ಇಬ್ಬರ ಹೆಸರು ಸೇರಿದಂತೆ ಒಟ್ಟು 7 ಶಂಕಿತ ಉಗ್ರರ ಹೆಸರುಗಳಿರುವುದಾಗಿ ತಿಳಿದುಬಂದಿದೆ.
ಬೌದ್ಧ ಧರ್ಮೀಯರ ಬಾಹುಳ್ಯದ ಮ್ಯಾನ್ಮಾರ್'ನಲ್ಲಿ ನಡೆದ ಮುಸ್ಲಿಮರ ಮೇಲಿನ ದೌರ್ಜನ್ಯದ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಬೌದ್ಧ ಧರ್ಮೀಯರ ಸ್ಥಳಗಳನ್ನು ಗುರು ಮಾಡಲು ಈ ಆರೋಪಿಗಳು ಸಂಚು ಸೂಪಿಸಿದ್ದರು. ಅಲ್ಲದೆ, ಭಾರತ ಸರ್ಕಾರದ ಮೇಲೂ ಯುದ್ಧ ಸಾರಲು ಸಂಚು ರೂಪಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಆ.6ರಂದು ರಾಮನಗರದ ಟ್ರೂಪ್ ಲೈನ್ ನಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಬಾಂಗ್ಲಾದೇಶ ಮೂಲಗ ಮುನೀರ್ ನನ್ನು ಎನ್ಐಎ ಬಂಧನಕ್ಕೊಳಪಡಿಸಿತ್ತು. ಆತನ ಬಳಿ ಸ್ಫೋಟಕಗಳು, ನಕ್ಷೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇದಾದ 2 ದಿನಗಳ ಬಳಿಕ ಬೆಂಗಳೂರಿನ ಕಂಟೋನ್ಮೆಂಟ್ ನಲ್ಲಿ ಪಶ್ಚಿಮ ಬಂಗಾಳ ಮೂಲದ ಅಸಾದುಲ್ಲಾನನ್ನು ಬಂಧಿಸಿದ್ದರು.
ಬಂಧಿತರ ಪೈಕಿ ರಾಮನಗರದಲ್ಲಿ ಸೆರೆ ಸಿಕ್ಕ ಮುನೀರ್ ಎಲ್ಲಾ ಕೃತ್ಯಗಳಿಗೆ ಮಾಸ್ಟರ್ ಮೈಂಡ್ ಆಗಿದ್ದ ಎಂದು ಹೇಳಲಾಗುತ್ತಿದೆ. ಈತ ಐವರನ್ನು ತಮ್ಮ ಕಡೆಗೆ ಸೆಳೆದುಕೊಂಡು ಬೋಧ್ಗಯಾ ಹಾಗೂ ಭಾರತದ ವಿವಿಧ ಬ1ದ್ಧ ಧರ್ಮೀಯರ ಸ್ಥಳಗಳಲ್ಲಿ ಸ್ಫೋಟಗಳನ್ನು ನಡೆಸಲು ಉದ್ದೇಶಿಸಿದ್ದ ಎಂದು ಹೇಳಲಾಗುತ್ತಿದೆ.