ರಾಜ್ಯ

ಕಸದ ಗುಂಡಿ, ಶೌಚಾಲಯ ತಾಣವಾಗುತ್ತಿದೆ ಪೊಲೀಸ್ ಚೌಕಿ: ನಗರ ಪೊಲೀಸರಿಗೆ ಶುರುವಾಯ್ತು ಹೊಸ ತಲೆನೋವು

Manjula VN
ಬೆಂಗಳೂರು: ಗಾರ್ಡೆನ್ ಸಿಟಿ ಎಂದೇ ಖ್ಯಾತಿ ಪಡೆದಿದ್ದ ಬೆಂಗಳೂರಿಗೆ ಕಸದ ಸಮಸ್ಯೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕಸ ಹಾಕಲು ಜನರು ಇದೀಗ ಪೊಲೀಸರ ಚೌಕಿಗಳನ್ನೇ ಬಳಕೆ ಮಾಡುತ್ತಿದ್ದು, ಕೆಲ ಜನರಂತೂ ಪೊಲೀಸ್ ಚೌಕಿಗಳನ್ನು ಶೌಚಾಲಯಗಳಾಗಿ ಬಳಕೆ ಮಾಡುತ್ತಿರುವುದು ನಗರ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 
ನಗರದ ಕೆಲವು ಪೊಲೀಸ್ ಚೌಕಿಗಳನ್ನು ಜನರು ಕಸ ಹಾಕುವ ಗುಂಡಿಗಳಂತೆ ಬಳಕೆ ಮಾಡಿಕೊಳ್ಳುತ್ತಿದ್ದು, ರಾತ್ರಿ ವೇಳೆಯಲ್ಲಿ ಕೆಲವರು ಚೌಕಿಗಳಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದಾಗಿ ಪೊಲೀಸರು ಚೌಕಿಗಳನ್ನು ಬಳಕೆ ಮಾಡಲು ಸಾಧ್ಯವಾಗದೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. 
ಬಸ್ ನಿಲ್ದಾಣಗಳ ಬಳಿಯಿರುವ ಪೊಲೀಸ್ ಚೌಕಿಗಳು ಇಂದು ಕಸದ ಗುಂಡಿ ಹಾಗೂ ಶೌಚಾಲಯಗಳಾಗಿ ಬಳಕೆಯಾಗುತ್ತಿವೆ. ರಾತ್ರಿ ವೇಳೆ ಸಾರ್ವಜನಿಕ ಶೌಚಾಲಯಗಳು ತೆರೆಯದಿರುವ ಕಾರಣ ಪೊಲೀಸ್ ಚೌಕಿಯಲ್ಲಿ ಖಾಸಗಿತನ ಇರುವ ಹಿನ್ನಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುವ ಜನರು ವಾಹನ ನಿಲ್ಲಿಸಿ ಪೊಲೀಸ್ ಚೌಕಿಯಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಮರುದಿನ ಪೊಲೀಸ್ ಚೌಕಿಗೆ ಬರುವ ಪೊಲೀಸರಿಗೆ ಇದು ಸಮಸ್ಯೆಯಾಗಿ ಪರಿಣಮಿಸಿದೆ. ಪೊಲೀಸ್ ಚೌಕಿಯಲ್ಲಿಯೇ ಮೂತ್ರ ವಿಸರ್ಜನೆ ಮಾಡಿರುತ್ತಾರೆ. ಇಂತಹ ಸ್ಥಳದಲ್ಲಿ ನಿಂತೆ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಸಂಚಾರಿ ಪೊಲೀಸ್ ಪೇದೆಯೊಬ್ಬರು ಪ್ರಶ್ನಿಸಿದ್ದಾರೆ. 
SCROLL FOR NEXT