ಸಂಗ್ರಹ ಚಿತ್ರ 
ರಾಜ್ಯ

ಬೆಳಗಾವಿ: ಗೋವಾ ಶಾಸಕರ ಪುತ್ರನ ಕಾರು ಹರಿದು ಯುವತಿ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ

ಗೋವಾ ಶಾಸಕರ ಪುತ್ರ ಚಲಾಯಿಸುತ್ತಿದ್ದ ಕಾರ್ ಡಿಕ್ಕಿಯಾಗಿ ಓರ್ವ ಯುವತಿ ಸಾವನ್ನಪ್ಪಿದ್ದರೆ ಆಕೆಯ ಸೋದರಿ ಗಂಬೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿ: ಗೋವಾ ಶಾಸಕರ ಪುತ್ರ ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿ ಓರ್ವ ಯುವತಿ ಸಾವನ್ನಪ್ಪಿದ್ದರೆ ಆಕೆಯ ಸೋದರಿ ಗಂಬೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. 
ಸೋಮವಾರ ಸಂಜೆ ಈ ಅಪಘಾತ ಸಂಭವಿಸಿದ್ದು ಘಟನೆಯು ಈ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದರು.
ಗೋವಾ ಶಾಸಕರಾದ ಗ್ಲೈನ್ ಟಿಕ್ಲೋ ಅವರ ಮಗ ಕೈಲ್ ಗ್ಲೈನ್ ಸೋಜಾ (27) ಕಾರು ಚಲಾಯಿಸುತ್ತಿದ್ದ. ಎನ್ಎಚ್ -4 ನಲ್ಲಿ ಕಾರು ಚಾಲನೆಯಲ್ಲಿದ್ದಾಗ ಹಣ್ಣಿನ ಮಾರುಕಟ್ಟೆ ಬಳಿ ಇಬ್ಬರು ಯುವತಿಯರು ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿದೆ. ಅಪಘಾತದಲ್ಲಿ ಯುವತಿ ತಾಹಿನಿಯತ್ ಸ್ಥಳದಲ್ಲೇ ಮೃತಪಟ್ಟಿದ್ದರು. 
ಅಪಘಾತಕ್ಕೆ ಕಾರಣವಾದ ಶಾಸಕರ ಪುತ್ರನನ್ನು ಬಂಧಿಸಲಾಗಿದೆ. ಆದರೆ ಇದೀಗ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ.
ಗಂಭೀರ ಗಾಯಗೊಂಡಿರುವ ಇನ್ನೋರ್ವ ಯುವತಿ ಸಾಮ್ರಿನ್ ಖಾಲಿದ್ ಬಿಸ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ.
ಇದೇ ವೇಳೆ ಘಟನೆಯಿಂದ ಉದ್ವಿಗ್ನಗೊಂಡ ಜನರು ಕಾರಿನತ್ತ ಕಲ್ಲು ತೂರಿ ಗಾಜುಗಳನ್ನು , ನಾಮ ಫಲಕಗಳನು ಹಾನಿಗೊಳಿಸಿದೆ. ಅಲ್ಲದೆ ಕಾರಿಗೆ ಬೆಂಕಿ ಹಚ್ಚಲೂ ಪ್ರಯತ್ನಿಸಿದ್ದಾರೆ. ಆಗ ಸ್ಥಳಕ್ಕೆ ಆಗಮಿಸಿದ ಪೋಲೀಸರು ಗಲಭೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ವೇಳೆ ಕಾರಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಕ್ಕಾಗಿ ಏಳು ಜನರನ್ನು ಬಂಧಿಸಲಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಪ್ರವಾಹದ ರೌದ್ರಾವತಾರ: ಮತ್ತೊಂದು ಜಲಪ್ರಳಯದ ಭೀತಿ; ರಕ್ಷಣಾ ಕಾರ್ಯಾಚರಣೆ ಸ್ಥಗಿತಕ್ಕೆ ಆದೇಶ, ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೈನಿಕರಿಗೆ ಸೂಚನೆ..!

'ಹನೂರು ಎನ್‌ಕೌಂಟರ್'ಗೆ ಬಿಗ್ ಟ್ವಿಸ್ಟ್: ತನಿಖೆಯಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಪ್ಯಾಂಗೋಲಿನ್ ಕಳ್ಳಸಾಗಣೆ ಜಾಲ ಪತ್ತೆ!

2019- 2023 ರವರೆಗೆ MUDA ದಲ್ಲಿ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು: ನಿವೇಶನ ಪಡೆದವರಿಗೆ ಯತೀಂದ್ರ ಸಿದ್ದರಾಮಯ್ಯ ಶಾಕ್!

US-Iran ಸಂಘರ್ಷ ಉಲ್ಬಣ: ನೌಕಾ ದಿಗ್ಬಂಧನ ಮುಂದುವರಿದರೆ ಶೇ.100ರಷ್ಟು ಪ್ರತೀಕಾರ; ‘ನೆತನ್ಯಾಹು ನರಕಕ್ಕೆ’: ಟ್ರಂಪ್‌ಗೆ Tehran ಖಡಕ್ ಎಚ್ಚರಿಕೆ

ಪ್ರವಾಹದ ಅಬ್ಬರಕ್ಕೆ ನೇಪಾಳ ತತ್ತರ; ಸಂಪರ್ಕಕ್ಕೆ ಸಿಗದೆ 290 ಭಾರತೀಯರು, ರಕ್ಷಣಾ ಕಾರ್ಯಾಚರಣೆ ಚುರುಕು..!