ಮೈಸೂರು ದಸರಾ ಉದ್ಘಾಟನೆಗೆ ಮುನ್ನ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿದ ಇನ್ಫೋಸಿಸ್ ಪ್ರತಿಷ್ಠಾನ ಅಧ್ಯಕ್ಷೆ ಸುಧಾಮೂರ್ತಿ, ಸಿಎಂ ಕುಮಾರಸ್ವಾಮಿ, ಸಚಿವರುಗಳಾದ ಜಿ ಟಿ ದೇವೇಗೌಡ, ಜಯಮಾಲಾ 
ರಾಜ್ಯ

ಕೊಡಗು ಜಿಲ್ಲೆ ಪ್ರವಾಹಪೀಡಿತರಿಗೆ ಇನ್ಫೋಸಿಸ್ ವತಿಯಿಂದ ಮನೆ ನಿರ್ಮಾಣ: ಸುಧಾ ಮೂರ್ತಿ

ಕೊಡಗು ಜಿಲ್ಲೆಯ ಪ್ರವಾಹ ಪೀಡಿತರಿಗೆ ವಸತಿ ಕಲ್ಪಿಸಿಕೊಡಲು ಇನ್ಫೋಸಿಸ್ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರದ ಜೊತೆ ಕೆಲಸದಲ್ಲಿ ....

ಮೈಸೂರು: ಮೈಸೂರು: ಕರ್ನಾಟಕ ಸರ್ಕಾರ ಭೂಮಿ ನೀಡಿದರೆ ಇನ್ಫೋಸಿಸ್ ವತಿಯಿಂದ ಕೊಡಗು ಜಿಲ್ಲೆಯ ಪ್ರವಾಹ ಪೀಡಿತರಿಗೆ ವಸತಿ ಕಲ್ಪಿಸಿಕೊಡಲಾಗುವುದು ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ತಿಳಿಸಿದ್ದಾರೆ.

ಅವರು ಇಂದು ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವಿ ಚಾಮುಂಡಿಗೆ ಪುಷ್ಪಾರ್ಚನೆ ಸಲ್ಲಿಸಿ 9 ದಿನಗಳ ನವರಾತ್ರಿ ಹಾಗೂ 10ನೇ ದಿನ ವಿಜಯದಶಮಿಯ ನಾಡಹಬ್ಬಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದರು.

ಸರ್ಕಾರ ಮಾಡುವ ಯಾವುದೇ ಕೆಲಸದಲ್ಲಿ ನಾವು ಕೈಜೋಡಿಸುವುದು ನಮ್ಮ ಕೆಲಸವಾಗಿದೆ, ನಮಗೆ ಸಮಾಜದಿಂದ ಸಿಕ್ಕಿದ ಹಣ ಮತ್ತೆ ಸಮಾಜಕ್ಕೆ ಹೋಗಬೇಕು. ಹೀಗಾಗಿ ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಜನರ ಪುನರ್ವಸತಿಗೆ ಸರ್ಕಾರ ಸ್ಥಳ ಗುರುತಿಸಿದರೆ ಇನ್ಫೋಸಿಸ್ ವತಿಯಿಂದ 25 ಕೋಟಿ ರೂಪಾಯಿ ವೆಚ್ಚದಲ್ಲಿ ವಸತಿ ನಿರ್ಮಿಸಿಕೊಡಲಾಗುವುದು ಎಂದು ಘೋಷಿಸಿದರು. ಇದನ್ನು ನಾನು ಕೊಡುಗೆ ಎಂದು ಭಾವಿಸದೆ ಕರ್ತವ್ಯ ಎಂದು ತಿಳಿಯುತ್ತೇನೆ ಎಂದು ಕೂಡ ಸುಧಾಮೂರ್ತಿ ಹೇಳಿದರು.

ದಸರಾ ಕೇವಲ ಇಂದು ನಿನ್ನೆಯದಲ್ಲ, ಸಾವಿರಾರು ವರ್ಷಗಳ ಇತಿಹಾಸ ಮೈಸೂರು ದಸರಾಗೆ ಇದೆ. ಹಿಂದಿನ ಕಾಲದಲ್ಲಿ ಇದನ್ನು ನವಮಿ ಹಬ್ಬ ಎಂದು ಕೂಡ ಆಚರಿಸುತ್ತಿದ್ದರೆ. ಕರ್ನಾಟಕ ರಾಜ್ಯದ ಉದಯ, ಕನ್ನಡ ಭಾಷೆ, ಸಂಸ್ಕೃತಿಯ ಉಳಿವು, ಬೆಳವಣಿಗೆಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ. ಇದಕ್ಕೆ ನಾವು ಮೈಸೂರು ದೊರೆಗಳಿಗೆ ಎಂದಿಗೂ ಕೃತಜ್ಞರಾಗಿರಬೇಕು ಎಂದರು.

ದಸರಾ ಉದ್ಘಾಟಿಸಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಿಸುತ್ತೇನೆ. ನನ್ನ ಜೀವನದ ಅತ್ಯಂತದ ಸಂತಸದ ದಿನ. ನಮ್ಮ ಕಾಲದಲ್ಲಿ ಇದಕ್ಕೆ ಅಜ್ಜಿ 'ಮಹಾನವಮಿ ಹಬ್ಬ' ಎಂದು ಹೇಳುತ್ತಿದ್ದರು. ಹಂಪಿಯಲ್ಲಿ ಇಂದಿಗೂ ಮಹಾನವಮಿ ದಿಬ್ಬವನ್ನು ಕಾಣಬಹುದು. ಮುಂದೆ ಮೈಸೂರು ಮಹಾರಾಜರು ಅದನ್ನು ಮುಂದುವರಿಸಿ ನಾಡಿನ ತುಂಬ ಪಸರುವಂತೆ ಮಾಡಿದರು. ಈ ವೈಭವದ ಉತ್ಸವ ಮತ್ತು ಹಬ್ಬವನ್ನು ಉಳಿಸಿದ್ದಕ್ಕೆ ಅವರಿಗೆ ನಾವು ಸದಾ ಕೃತಜ್ಞರಾಗಿರಬೇಕು ಎಂದು ಸುಧಾ ಮೂರ್ತಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT