ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ 
ರಾಜ್ಯ

ಅನುಮತಿ ನಿರಾಕರಣೆ ನಡುವೆಯೂ ಬದಲಾದ ಸ್ಥಳದಲ್ಲಿ ಹೆಚ್ಎಎಲ್ ನೌಕರರೊಂದಿಗೆ ರಾಹುಲ್ ಸಂವಾದ

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬು ಆರೋಪಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಅ.13ರಂದು ಬೆಂಗಳೂರಿನಲ್ಲಿ..

ಬೆಂಗಳೂರು: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬು ಆರೋಪಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಅ.13ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಸಮಾವೇಶ ಮುಂದೂಡಲಾಗಿದೆ. ಆದರೆ, ದೇಶಕ್ಕೆ ಹೆಚ್ಎಎಲ್ ಕೊಡುಗೆ ಬಗ್ಗೆ ಸಂಸ್ಥೆಯ ನಿವೃತ್ತ ನೌಕರರು, ಅಧಿಕಾರಿಗಳು ಹಾಗೂ ಗಣ್ಯರೊಂದಿಗೆ ರಾಹುಲ್ ಗಾಂಧಿ ನಡೆಸಲಿರುವ ಸಂವಾದ ನಿಗದಿಯಂತೆ ನಡೆಯುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಗುರುವಾರ ಹೇಳಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1 ಲಕ್ಷ ಜನರನ್ನು ಸೇರಿಸಿ ರಾಹುಲ್ ನೇತೃತ್ವದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲು ಉದ್ದೇಶಿಸಿತ್ತು. ಆದರೆ, ರಾಹುಲ್ ಗಾಂಧಿ ಅವರು ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಈ ಸಮಾವೇಶವನ್ನು ಮುಂದೂಡಲಾಗಿದೆ. ಶೀಘ್ರದಲ್ಲಿಯೇ ಮತ್ತೊಂದು ದಿನ ನಿಗದಿಪಡಿಸಿ ಸಮವೇಶ ನಡೆಸಲಾಗುವುದು ಎಂದು ತಿಳಿಸಿದರು. 
ಹೆಚ್ಎಎಲ್ ಕೊಡುಗೆ ಬಗ್ಗೆ ರಾಹುಲ್ ಗಾಂಧಿಯವರು ಸಂಸ್ಥೆಯ ನಿವೃತ್ತ ನೌಕರರು, ಅಧಿಕಾರಿಗಳು ಹಾಗೂ ಗಣ್ಯರೊಂದಿಗಿನ ಸಂವಾದ ನಿಗದಿಯಂತೆಯೇ ಅ.13ರಂದೇ ನಡೆಯಲಿದೆ. ಸಂವಾದ ರದ್ದಾಗಿಲ್ಲ, ಈ ಸಂವಾದವನ್ನು ಕಾಂಗ್ರೆಸ್ ಆಯೋಜಿಸಿಲ್, ಬದಲಾಗಿ ಖಾಸಗಿ ಸಂಘಟನೆಗಳು ಆಯೋಜಿಸಿವೆ ಎಂದಿದ್ದಾರೆ. 
ರಾಹುಲ್ ಸಂವಾದಕ್ಕೆ ಹೆಚ್ಎಎಲ್ ಅವಕಾಶ ನಿರಾಕರಿಸಿದೆಯಲ್ಲ ಎಂಬ ಪ್ರಶ್ನೆಗೆ ಇದೇ ವೇಳೆ ಉತ್ತರಿಸಿರುವ ಅವರು, ಸಂವಾದವನ್ನು ಕೆಪಿಸಿಸಿ ಆಯೋಜಿಸಿಲ್ಲ. ಖಾಸಗಿ ಸಂಘಟನೆಗಳು ಆಯೋಜಿಸಿರುವುದು. ಅನುಮತಿ ಕೇಳಿದ್ದರೆ ತಾನೆ ಅವಕಾಶ ನಿರಾಕರಿಸುವ ಪ್ರಶ್ನೆ ಬರುತ್ತದೆ. ಕೆಪಿಸಿಸಿ ಇಂತಹ ಯಾವುದೇ ಅನುಮತಿ ನೀಡುವಂತೆ ಹೆಚ್ಎಎಲ್ ಅನ್ನು ಕೋರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!