ಮೆಟ್ರೋ ರೈಲು 
ರಾಜ್ಯ

ನಮ್ಮ ಮೆಟ್ರೋಗೆ ಎಂಟನೇ ವರ್ಷ : ಪ್ರತಿದಿನ ಐದು ಲಕ್ಷ ಪ್ರಯಾಣಿಕರ ಸಂಚಾರದ ಗುರಿ

ನಮ್ಮ ಮೆಟ್ರೋ ರೈಲು ಸೇವೆಗೆ ಏಳು ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಜನರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯಿಂದ ಪ್ರೇರೆಪಣೆಗೊಂಡಿರುವ ಬಿಎಂಆರ್ ಸಿಎಲ್ ಮುಂದಿನ ವರ್ಷದೊಳಗೆ ಪ್ರತಿ ನಿತ್ಯ 5 ಲಕ್ಷ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಗುರಿ ಹೊಂದಿದೆ.

ಬೆಂಗಳೂರು: ನಮ್ಮ ಮೆಟ್ರೋ ರೈಲು ಸೇವೆಗೆ ಏಳು ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಜನರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯಿಂದ ಪ್ರೇರೆಪಣೆಗೊಂಡಿರುವ ಬಿಎಂಆರ್ ಸಿಎಲ್ ಮುಂದಿನ ವರ್ಷದೊಳಗೆ ಪ್ರತಿ ನಿತ್ಯ 5 ಲಕ್ಷ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಗುರಿ ಹೊಂದಿದೆ.

ಈಗ ವಾರಾಂತ್ಯ ದಿನಗಳಲ್ಲಿ ಸರಾಸರಿ 4.1 ಲಕ್ಷ ಜನರು ಪ್ರತಿನಿತ್ಯ ಮೆಟ್ರೋದಲ್ಲಿ ಸಂಚರಿಸುತ್ತಿದ್ದಾರೆ. ದಸರಾ ರಜಾ ದಿನವಾದ ಅಕ್ಟೋಬರ್ 17 ರಂದು ಇದೇ ಮೊದಲ ಬಾರಿಗೆ ನಾಲ್ಕೂವರೆ ಲಕ್ಷ ಜನರು ಮೆಟ್ರೋದಲ್ಲಿ ಸಂಚರಿಸಿದ್ದಾರೆ.

ಅಕ್ಟೋಬರ್ 21, 2011 ರಲ್ಲಿ ಮೊದಲ ಬಾರಿಗೆ ಮಹಾತ್ಮಗಾಂಧಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ರೈಲು ಸಂಚಾರ  ಆರಂಭಗೊಂಡಿತ್ತು. ಬಿಎಂಆರ್ ಸಿಎಲ್ ಆಗ ಬಿಟ್ಟಿರುವ ಆರು ಬೋಗಿಗಳ ರೈಲುಗಳಿಂದ ಐದು ಲಕ್ಷ ಪ್ರಯಾಣಿಕರ ಸಂಚಾರದ ಗುರಿ ಸಾಧನೆ ಕಷ್ಟಸಾಧ್ಯವಾಗುವುದಿಲ್ಲ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ವಾರದಲ್ಲಿ  ಪ್ರತಿನಿತ್ಯ ಸರಾಸರಿ 4 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.  ಆರು ಬೋಗಿಗಳ ರೈಲುನ್ನು ಬಿಡುವ ಮುಂಚೆ ಪ್ರತಿದಿನ 3.8 ಲಕ್ಷ ಜನರು ಸಂಚರಿಸುತ್ತಿದ್ದರು. ಜೂನ್, 23 ಪ್ರಥಮ  ಹಾಗೂ ಅಕ್ಟೋಬರ್ 4 ರಿಂದ   ದ್ವಿತೀಯ  ಆರು ಬೋಗಿಗಳ ರೈಲು ನೇರಳ ಮಾರ್ಗದಲ್ಲಿಸಂಚಾರ ಆರಂಭಗೊಂಡ ನಂತರ ಮಹಿಳೆಯರಿಗೂ ಅನುಕೂಲವಾಗಿದ್ದು, ಪ್ರತಿ ನಿತ್ಯ 4 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.

ನವೆಂಬರ್ ಮೊದಲ ವಾರದಲ್ಲಿ ಮೂರನೇ ಆರು ಬೋಗಿಗಳ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಬಿಎಂಆರ್ ಸಿಎಲ್ ಹಿರಿಯ ಅಧಿಕಾರಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮೂರನೇ ಆರು ಬೋಗಿ ರೈಲಿನ ಪರೀಕ್ಷಾರ್ಥ ಕಾರ್ಯ ನಡೆಯುತ್ತಿದ್ದು, ಅಕ್ಟೋಬರ್ ತಿಂಗಳಾಂತ್ಯಕ್ಕೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಸಂಚಾರ ಆರಂಭಿಸಲಿದೆ. ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಉಳಿದಿರುವ ಎಲ್ಲಾ 48 ರೈಲುಗಳಿಗೂ ಆರು ಬೋಗಿಗಳನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು.

ಮೆಟ್ರೋ ರೈಲುಗಳಿಂದ ಪ್ರತಿದಿನ ಬಿಎಂಆರ್ ಸಿಎಲ್ 1 ಕೋಟಿಗೂ ಅಧಿಕ ಆದಾಯ ಗಳಿಸುತ್ತಿದೆ. ಪ್ರತಿದಿನ 1500 ರಿಂದ 1700 ಸ್ಮಾರ್ಟ್ ಕಾರ್ಡ್ ಮಾರಾಟ ಮಾಡಲಾಗುತ್ತಿದೆ. ಜಾಹಿರಾತು, ಅಂಗಡಿಮಳಿಗೆಗಳು, ಆಸ್ತಿ ಗುತ್ತಿಗೆ , ಟೆಂಡರ್ ದಾಖಲೆ ಮಾರಾಟದಿಂದ ಲಾಭ ಬರುತ್ತಿಲ್ಲ ಮುಂದಿನ  ವರ್ಷದಲ್ಲಿ ಲೊಕೊ ಪೈಲಟ್ಸ್ ಗಳಿಗೆ ತರಬೇತಿ  ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT