ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಅನಾರೋಗ್ಯ ಪೀಡಿತ ತಾಯಿ ಅಡುಗೆ ಮಾಡು ಎಂದಿದ್ದಕ್ಕೆ ಆತ್ಮಹತ್ಯೆ ಶರಣಾದ ಬಾಲಕಿ!

ಅನಾರೋಗ್ಯ ಪೀಡಿತ ತಾಯಿಯೊಬ್ಬರು ಅಡುಗೆ ಮಾಡು ಎಂದು ಹೇಳಿದ್ದಕ್ಕೆ 15 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೆಚ್ಎಸ್ಆರ್ ಲೇಔಟ್ ನಲ್ಲಿ ಶುಕ್ರವಾರ ನಡೆದಿದೆ...

ಬೆಂಗಳೂರು: ಅನಾರೋಗ್ಯ ಪೀಡಿತ ತಾಯಿಯೊಬ್ಬರು ಅಡುಗೆ ಮಾಡು ಎಂದು ಹೇಳಿದ್ದಕ್ಕೆ 15 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೆಚ್ಎಸ್ಆರ್ ಲೇಔಟ್ ನಲ್ಲಿ ಶುಕ್ರವಾರ ನಡೆದಿದೆ. 
ಪರಂಗಿ ಪಾಳ್ಯದ ನಿವಾಸಿ ಮೀನಾ ಮತ್ತು ನೂತನ್ ದಾಸ್ ದಂಪತಿಯ ಪುತ್ರಿ  ಶತಾಬ್ದಿ ದಾಸ್ (15) ಸಾವನ್ನಪ್ಪಿದ ಬಾಲಕಿಯಾಗಿದ್ದಾಳೆ. 
ಮೂಲತಃ ಅಸ್ಸಾಂನ ಶತಾಬ್ದಿ ತನ್ನ ಪೋಷಕರೊಂದಿಗೆ ಒಂದು ವರ್ಷದಿಂದ ಪರಂಗಿಪಾಳ್ಯದಲ್ಲಿ ನೆಲೆಸಿದ್ದರು. ಮೀನಾ ಮತ್ತು ನೂತರ್ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಜ್ವರ ಇದ್ದ ಕಾರಣ ಮೀನಾ ಅವರು ಅಡುಗೆ ಮಾಡುವಂತೆ ಮಗಳಿಗೆ ಹೇಳಿದ್ದಾರೆ. ಆದರೆ, ಇದಕ್ಕೆ ಒಪ್ಪದ ಶತಾಬ್ದಿ ಅಡುಗೆ ಮಾಡುವುದಿಲ್ಲ ಎಂದು ತಾಯಿ ಜೊತೆ ವಾಗ್ವಾದ ಮಾಡಿದ್ದಳು. 
ಈ ವೇಳೆ ನೂತನ್ ದಾಸ್ ಹಾಗೂ ತಾಯಿ ಮೀನಾ ಇಬ್ಬರು ಪುತ್ರಿಗೆ ಬೈದು ಬುದ್ದಿವಾದ ಹೇಳಿದ್ದರು. ಶುಕ್ರವಾರ ರಾತ್ರಿ ನೂತನ್ ಪತ್ನಿಯನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳಿದ್ದರು. 
ಮನೆಯಲ್ಲಿ ಯಾರೂ ಇಲ್ಲದ ವೇಳೆ ಶತಾಬ್ದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೋಷಕರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಹೆಚ್ಎಸ್ಆರ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!

ಟಿವಿ, ಒಟಿಟಿಗೆ ಬರುತ್ತಾ 'ಪ್ರೇಮದ ಊರಲಿ'? ಚಿತ್ರತಂಡ ಹೇಳಿದ್ದೇನು?

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಅತಿಯಾಗಿ ಭಯ ಹುಟ್ಟಿಸಬೇಡಿ, ನಿಮ್ಮ ಹೆದರಿಕೆಗೆ ಬಗ್ಗಲ್ಲ: ಗಾಯದ Video ಶೇರ್​ ಮಾಡಿ ಪೊಲೀಸರಿಗೆ ಆಮೀರ್ ಖಾನ್ ಸೊಸೆ ತಿರುಗೇಟು!