ರಾಜ್ಯ

ಬೆಂಗಳೂರು: ಮಾಲೀಕನ ಮನೆಯಿಂದ ರೂ.90 ಲಕ್ಷ ಮೌಲ್ಯದ ಚಿನ್ನ, ವಜ್ರಾಭರಣ ಕದ್ದ ಬಿಹಾರದ ಬಾಣಸಿಗ!

Manjula VN
ಬೆಂಗಳೂರು: ಉದ್ಯಮಿಯೊಬ್ಬರ ಮನೆಯಲ್ಲಿ ಲಕ್ಷಾಂತರ ರುಪಾಯಿ ಬೆಲೆಬಾಳುವ ವಜ್ರ ಹಾಗೂ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಬಿಹಾರ ಮೂಲದ ಆರೋಪಿಯನ್ನು ಮಡಿವಾಳ ಠಾಣೆ ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ. 
ಬಿಹಾರದ ಮದುಬನಿ ಜಿಲ್ಲೆಯ ಅಖಿಲೇಶ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯಿಂದ ರೂ.90 ಲಕ್ಷ ಬೆಲೆಬಾಳುವ 2 ಕೆಜಿ ವಜ್ರ, ಚಿನ್ನಾಭರಣ ಹಾಗೂ ಅರ್ಧ ಕೆಜಿ ಬೆಳ್ಳಿ ಸಾಮಾನುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 
ಕೈಗಾರಿಕೋದ್ಯಮಿ ಸತ್ಯಪ್ರಕಾಶ್ ಅವರು ನಿವಾಸ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿದ್ದು, ಕಳೆದ ಒಂದೂವರೆ ವರ್ಷದಿಂದ ಉದ್ಯಮಿ ಮನೆಯಲ್ಲಿ ಅಖಿಲೇಶ್ ಅಡುಗೆ ಹಾಗೂ ಮನೆ ಕೆಲಸಕ್ಕಿದ್ದ. ಬಳಿಕ ಹೆಚ್ಚಿನ ವೇತನ ಸಿಗುತ್ತದೆ ಎಂಬ ಕಾರಣಕ್ಕೆ ಮುಂಬೈಗೆ ತೆರಳಿದ್ದ. ಮುಬೈನಲ್ಲಿ ಕೆಲಸ ತ್ಯಜಿಸಿದ್ದ ಆರೋಪಿ ಮತ್ತೆ ಸತ್ಯ ಪ್ರಕಾಶ್ ಅವರ ಮನೆಗೆ ಬಂದು ಕೆಲಸಕ್ಕೆ ಸೇರಿದ್ದ.
ದಸರಾ ಹಿನ್ನಲೆಯಲ್ಲಿ ಅ.17 ರಂದು ಸತ್ಯ ಪ್ರಕಾಶ್ ಅವರ ಕುಟುಂಬ ಶಾಪಿಂಗ್'ಗೆ ತೆರಳಿತ್ತು. ಆರೋಪಿ ಹಿಂಬಾಗಿಲ ಮೂಲಕ ಮನೆ ಪ್ರವೇಶ ಮಾಡಿ ಲಾಕರ್ ಸಮೇತ ವಜ್ರ, ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಬ್ಯಾಗ್ ನಲ್ಲಿ ತುಂಬಿಕೊಂಡು ಪರಾರಿಯಾಗಿದ್ದ. 
ಮನೆಯಲ್ಲಿದ್ದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಅಖಿಲೇಶ್ ಕಳ್ಳತನ ಮಾಡಿಕೊಂಡು ಹೋಗಿರುವ ದೃಶ್ಯ ಸೆರೆಯಾಗಿತ್ತು. ಕೂಡಲೇ ಸತ್ಯ ಪ್ರಕಾಶ್ ಅವಡು ಮಡಿವಾಳ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಸಂಬಂಧ ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ವಿಶೇಷ ತಂಡ ರಚಿಸಲಾಗಿತ್ತು ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರು ಹೇಳಿದ್ದಾರೆ. 
ಕಳ್ಳತನ ಮಾಡಿದ ಬಳಿಕ ಆರೋಪಿ ಅ.17 ರಂದು ಯಶವಂತಪುರದಿಂದ ಔರಗೆ ಹೋಗುವ ರೈಲು ಹತ್ತಿದ್ದ. ಟಿಕೆಟ್ ತೆಗೆದುಕೊಂಡರೆ, ಸಿಕ್ಕಿಹಾಕಿಕೊಳ್ಳುತ್ತೇನೆಂಬ ಭಯದಲ್ಲಿ ಟಿಕೆಟ್ ಕೊಳ್ಳದೆ ಪ್ರಯಾಣ ಬೆಳೆಸಿದ್ದ ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ. 
SCROLL FOR NEXT