ವಿದ್ಯುತ್ ಕಂಬ ಏರಿದ ಮಹಿಳಾ ಕಾರ್ಪೋರೇಟರ್
ಬೆಳಗಾವಿ: ತಮ್ಮ ವಾರ್ಡ್ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಮಹಿಳಾ ಕಾರ್ಪೋರೇಟರ್ ಒಬ್ಬರು ವಿದ್ಯುತ್ ಕಂಬ ಏರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ 41ನೇ ವಾರ್ಡ್ ಸದಸ್ಯೆ ಸರಳಾ ಹೆರೇಕರ್ , ಬೆಳಗಾವಿ ನಗರ ಕಾರ್ಪೋರೇಷನ್ ಮೇಲೆ ಒತ್ತಡ ಹಾಕಲು ವಿದ್ಯುತ್ ಕಂಬ ಏರಿದ್ದು ಬಿಸಿಸಿಗೆ ಮುಜುಗರ ಉಂಟು ಮಾಡಿತ್ತು.
ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು ಸರಳಾ ಅವರು ವಿದ್ಯುತ್ ಕಂಬ ಏರಿರುವ ವಿಷಯದ ಬಗ್ಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಎಪಿಎಂಸಿ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಕಾರಣ ವಿಚಾರಿಸಿದರು. ಬೆಳಗಾವಿ ಕಾರ್ಪೋರೇಷನ್ ತಮ್ಮ ವಾರ್ಡ್ ಅನ್ನು ನಿರ್ಲಕ್ಷಿಸುತ್ತಿದೆ ಎಂದು ದೂರಿದ್ದಾರೆ.
ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಅಡಿಯಲ್ಲಿ ಸರ್ಕಾರದ ಹಲವು ಯೋಜನೆಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ ಬೃಹತ್ ಮಟ್ಟದ ಅನುದಾನ ಬಿಡುಗಡೆ ಮಾಡಬೇಕಿದೆ, ಆದರೆ ಕಾರ್ಪೋರೇಷನ್ ಅಧಿಕಾರಿಗಳು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಾವು ವಿದ್ಯುತ್ ಕಂಬದಿಂದ ಕೆಳಗಿಳಿಯಬೇಕಾದರೆ ತಮ್ಮ ಷರತ್ತನ್ನು ಪೂರೈಸಬೇಕು. ಬಿಸಿಸಿ ಆಯುಕ್ತ ಶಶಿಧರ್ ಕುರೆರ್ ಸ್ಥಳಕ್ಕಾಗಮಿಸಿ ಅಭಿವೃದ್ಧಿ ಕಾರ್ಯಗಳಿಗೆ ಕೂಡಲೇ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರ್ ಮಾತ್ರ ತಾವು ಕಂಬ ಬಿಟ್ಟು ಇಳಿಯುವುದಾಗಿ ಕಂಡಿಷನ್ ಹಾಕಿದ್ದರು, ಆಕೆಯನ್ನು ಕೆಳಗಿಳಿಸಲು ಪೊಲೀಸ್ ಇನ್ಸ್ ಫೆಕ್ಟರ್ ಮಾಡಿದ ಹಲವು ಪ್ರಯತ್ನಗಳು ವಿಫಲವಾದವು,
ಕೂಡಲೇ ಇನ್ಸ್ ಪೆಕ್ಚರ್ ಬಿಸಿಸಿ ಆಯಕ್ತ ಶಶೆಧರ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು, ತಕ್ಷಣವೇ ಸ್ಥಳಕ್ಕಾಗಿಮಿಸಿದ ಕುರೇರ್ ಭರವಸೆ ನೀಡಿದರು, ಕೊನೆಗೂ
ಒಂದೂವರೆ ಗಂಟೆಗಳ ನಂತರ ಆಕೆಯನ್ನು ಕೆಳಗಿಳಿಸುವಲ್ಲಿ ಪೊಲೀಸರು ಸಫಲರಾದರು, ಮಹಿಳಾ ಪೇದೆಗಳ ಜೊತೆ ಆಕೆ ಸುರಕ್ಷಿತವಾಗಿ ಕೆಳಗಿಳಿದರು, ತಮ್ಮ ಪ್ರತಿಭಟನೆ ಹಿಂತೆಗೆದುಕೊಂಡಿರುವುದಾಗಿ ತಿಳಿಸಿದರು.