ರಾಜ್ಯ

ಸೈಟ್ ಹಸ್ತಾಂತರಕ್ಕೆ ಬಿಲ್ಡರ್ ವಿಫಲ, 5 ಲಕ್ಷ ಮುಂಗಡ ಹಣ ಹಿಂತಿರುಗಿಸಲು ಗ್ರಾಹಕ ನ್ಯಾಯಾಲಯ ಆದೇಶ

Raghavendra Adiga
ಬೆಂಗಳೂರು: ಬೆಂಗಳುರು ನಗರ ಜಿಲ್ಲೆ ಗ್ರಾಹಕ ವಿವಾದ ಪರಿಹಾರ ನ್ಯಾಯಾಲಯ ಬೆಂಗಳೂರು  ಹೆಚ್.ಎಸ್.ಆರ್ ಲೇಔಟ್ ನ ಟಿಜಿಎಸ್ ಕನ್ಸ್ಟ್ರಕ್ಟರ್ ಸಂಸ್ಥೆಗೆ ಗ್ರಾಹಕರಿಂದ ಪಡೆದಿದ್ದ ಮುಂಗಡ  5 ಲಕ್ಷ  ರೂ. ಅನ್ನು ಹಿಂತಿರುಗಿಸಬೇಕು ಎಂದು ಆದೇಶಿಸಿದೆ.
ಜುಲೈ 2016 ರಲ್ಲಿ,ಬಿಲ್ಡರ್ ಮತ್ತು ಡೆವಲಪರ್ ಸಂಸ್ಥೆ ಗ್ರಾಹಕರಿಗೆ ನೀಡಿದ್ದ ಮಾತಿನ ಪ್ರಕಾರ ಸೈಟ್ ಗಳನ್ನು ಅಭಿವೃದ್ದಿ ಪಡಿಸಿ ವಿಂಗಡನೆ ಮಾಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಮಾನ ನಿಡಿದೆ.
ಆನೆಕಲ್ ತಾಲೂಕಿನ ಚಿಕ್ಕನಾಗಮಂಗಲ ಗ್ರಾಮದಲ್ಲಿ ಸಂಸ್ಥೆ ವಸತಿ ಸಮುಚ್ಚಯ (ರೆಸಿಡೆನ್ಸ್ ಲೇಔಟ್) ನಿರ್ಮಿಸುವುದಾಗಿ ನೆಲ್ಸನ್ ಪೌಲ್ (47) ಎನ್ನುವವರಿಂದ ಐದು ಲಕ್ಷ ಮುಂಗಡ ಹಣ ಪಡೆದಿದ್ದು ಇದುವರೆಗೆ ಯಾವುದೇ ಅಭಿವೃದ್ದಿ ಕಾರ್ಯ ನಡೆಯದ ಕಾರಣ ಪೌಲ್ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದಾರೆ.
ಇನ್ನು ಟಿಜಿಎಸ್ ಕನ್ಸ್ಟ್ರಕ್ಷನ್ ಜನವರಿ 2017ರಲ್ಲಿ ತಾನು ಮುಂಗಡ ಬುಕ್ಕಿಂಗ್ ರದ್ದುಗೊಳಿಸಿತ್ತು.ಸಂಸ್ಥೆಯ ಎಂಡಿ  ಮಂದೀಪ್ ಕೌರ್ ಅವರಿಗೆ ಮುಂಗಡ ಹಣ ಹಿಂತಿರುಗಿಸಲು ಪೌಲ್ ಅನೇಕ ಬಾರಿ ಪತ್ರಗಳನ್ನು ಬರೆದು ಕೇಳಿದರೂ ಸರಿಯಾದ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಆತ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ವಾದ ಆಲಿಸಿದ ನ್ಯಾಯಾಲಯ ಸಂಸ್ಥೆಯ ಎಂಡಿ ತಪ್ಪಿತಸ್ಥರಾಗಿದ್ದು ಅವರು ಗ್ರಾಹಕರ ಮುಂಗಡ ಹಣವನ್ನು ಸಂಪೂರ್ಣವಾಗಿ ಹಿಂತಿರುಗಿಸಬೇಕು. ಅಲ್ಲದೆ ಹಾಗೆ ಸಂಪೂರ್ಣ ಹಣ ಹಿಂತಿರುಗಿಸುವವರೆಗೆ ಗ್ರ್ಹಕರಿಗೆ ವಾರ್ಷಿಕ ಶೇ. 18ರಷ್ಟು ಬಡ್ಡಿ ನಿಡಬೇಕು ಎಂದು ತೀರ್ಪಿತ್ತಿದೆ.
SCROLL FOR NEXT