ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಮ್ಮುಖದಲ್ಲಿ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ಯಶಸ್ವಿನಿ ಗೌಡ 
ರಾಜ್ಯ

ಶ್ರೀ ರಾಮ ಸೇನೆ ಬೆಂಗಳೂರು ಅಧ್ಯಕ್ಷೆಯಾಗಿ ರೌಡಿಶೀಟರ್​ ಯಶಸ್ವಿನಿ ಗೌಡ ಆಯ್ಕೆ

ಶ್ರೀರಾಮಸೇನೆ ಸಂಘಟನೆಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಡಾ.ಯಶಸ್ವಿನಿ ಗೌಡ ...

ಬೆಂಗಳೂರು: ಶ್ರೀರಾಮಸೇನೆ ಸಂಘಟನೆಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಡಾ.ಯಶಸ್ವಿನಿ ಗೌಡ ಅವರು ಆಯ್ಕೆಯಾಗಿದ್ದಾರೆ.

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್​ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಇಂದು ನಡೆದ ಸಮಾರಂಭದಲ್ಲಿ ಯಶಸ್ವಿನಿ ಗೌಡ ಅವರನ್ನು ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು.

ಯಶಸ್ವಿನಿ ಗೌಡ ರೌಡಿ ಶೀಟರ್ ಆಗಿದ್ದು ಅವರನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಮೀಟರ್​ ಬಡ್ಡಿ ದಂಧೆ ನಡೆಸುತ್ತಿದ್ದ ಯಶಸ್ವಿನಿ ಗೌಡ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣವಿದ್ದು, ಇಂಥ ರೌಡಿ ಶೀಟರ್​ಗೆ ಅಧಿಕಾರ ಕೊಟ್ಟಿದ್ದು ಎಷ್ಟು ಸರಿ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಯಶಸ್ವಿನಿ ಪತಿ ಮಹೇಶ್​ ಕೂಡ ರೌಡಿ ಶೀಟರ್​. ಮಹೇಶ್​ ಯಶಸ್ವಿನಿ ಅವರ ಎರಡನೇ ಪತಿಯಾಗಿದ್ದು ಪುಟ್ಟೇನಹಳ್ಳಿ ಠಾಣೆಯಲ್ಲಿ ರೌಡಿಶೀಟರ್​ ಆಗಿದ್ದಾರೆ. ತಮ್ಮ ಮೊದಲ ಪತಿಯ ಕೊಲೆಯಲ್ಲಿ ಯಶಸ್ವಿನಿ ಗೌಡ ವಿರುದ್ಧ ಆರೋಪ ಕೂಡ ಕೇಳಿಬರುತ್ತಿದೆ.

ಶ್ರೀರಾಮ ಸೇನೆ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿಕೊಂಡ ಮೇಲೆ ಮಾತನಾಡಿದ ಯಶಸ್ವಿನಿ ಗೌಡ, ''ನಾನು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು ಖುಷಿಯಿದೆ. ನನ್ನ ವಿರುದ್ಧ ರೌಡಿ ಶೀಟ್​ ಓಪನ್​ ಆಗಿದ್ದಕ್ಕೆ ಆರ್​.ಟಿ.ನಗರದ ಅಂದಿನ ಇನ್ಸ್​ಪೆಕ್ಟರ್​ ಕಾರಣ. ಪ್ರಕರಣವೊಂದರಲ್ಲಿ ನಾನೇ ದೂರು ಕೊಟ್ಟು ಅವರನ್ನು ಅಮಾನತ್ತು​ ಮಾಡಿಸಿದ್ದೆ. ಇದರಿಂದಲೇ ಅವರು ನನ್ನ ವಿರುದ್ಧ ರೌಡಿಶೀಟ್​ ಓಪನ್​ ಮಾಡಿಸಿದರು ಎಂದು ಹೇಳಿದ್ದಾರೆ.

ನಾನು ಯಾವ ಮಹಿಳೆಗೂ ಹೊಡೆದಿಲ್ಲ. ದೂರು ನೀಡಿದ್ದವರು ಕೋರ್ಟ್​ನಲ್ಲಿ ರಾಜಿಯಾಗಿದ್ದಾರೆ. ಇವತ್ತಿನವರೆಗೂ ಯಾವುದೇ ಠಾಣೆಯಿಂದ ನೋಟಿಸ್​ ಬಂದಿಲ್ಲ. ರೌಡಿಗಳೇನಾದರೂ ಸಮಾಜಸೇವೆ ಮಾಡಬಾರದು ಎಂದಿದೆಯಾ. ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಮೋದ್ ಮುತಾಲಿಕ್, ನಮ್ಮ ಸೇನೆಯ ಪದ್ಧತಿ ಪ್ರಕಾರ ಅವರನ್ನು ಆಯ್ಕೆ ಮಾಡಲಾಗಿದೆ. ರೌಡಿಶೀಟರ್​ ಅನ್ನೋದು ಇವತ್ತು ಒಂದು ಫ್ಯಾಷನ್​ ಆಗಿದೆ. ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಕೂಡ ರೌಡಿಶೀಟ್​ ಓಪನ್​ ಮಾಡಲಾಗಿದೆ ಎಂದರು. ನನ್ನ ಮೇಲೆ ಕೂಡ ಹಲವು ಕೇಸ್​ಗಳಿದ್ದು ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದಲ್ಲಿ ಆರೋಪಿಯೆಂದು ಸಾಬೀತಾದರೆ ನಾವು ಅವರನ್ನು ಹುದ್ದೆಯಿಂದ ಕೆಳಗೆ ಇಳಿಸುತ್ತೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಂಸತ್ ಚಳಿಗಾಲದ ಅಧಿವೇಶನ: SIR ಬಗ್ಗೆ ಚರ್ಚೆಗೆ ವಿಪಕ್ಷಗಳ ಪ್ರತಿಭಟನೆ, ಗದ್ದಲ, ಲೋಕಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ

ಸಂಸತ್ ಚಳಿಗಾಲದ ಅಧಿವೇಶನ: ಸೋಲಿನ ಭೀತಿ ಚರ್ಚೆಗೆ ಕಾರಣವಾಗಬಾರದು- ವಿಪಕ್ಷಗಳಿಗೆ ಪ್ರಧಾನಿ ಮೋದಿ ಒತ್ತಾಯ

ಇಶಾ ಯೋಗ ಕೇಂದ್ರದಲ್ಲಿ ರಾಜ್ ನಿಡಿಮೋರು ಜೊತೆ ಎರಡನೇ ಮದುವೆಯಾದ ನಟಿ ಸಮಂತಾ ರುತ್ ಪ್ರಭು!

'ಈ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ, ಇಚ್ಛಾಶಕ್ತಿಯೇ ದೊಡ್ಡ ಸಂಪತ್ತು': ಅಂಧ ಕ್ರಿಕೆಟ್ ಆಟಗಾರ್ತಿಯ ಯಶೋಗಾಥೆ!

ಜಗತ್ತಿನ ಗಮನ ಸೆಳೆಯಲಿದೆ ಪುಟಿನ್ ದೆಹಲಿ ಭೇಟಿ (ಜಾಗತಿಕ ಜಗಲಿ)

SCROLL FOR NEXT