ರಾಜ್ಯ

ಬೆಳಗಾವಿ:ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಪ್ರಾರಂಭ !

Nagaraja AB

ಬೆಳಗಾವಿ:ಕುಂದಾನಗರಿ ಬೆಳಗಾವಿಯಲ್ಲಿ ಅದ್ದೂರಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಆರಂಭವಾಗಿದ್ದು, ಹುತಾತ್ಮ ಚೌಕದ ಬಳಿ ಲಕ್ಷಾಂತರ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಪೂಜೆ ಸಲ್ಲಿಸುವ ಮೂಲಕ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು. ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್,  ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ, ಮೇಯರ್ ಚಿಕ್ಕಲದಿನಿ ಬಸಪ್ಪ ಸಿದ್ದಪ್ಪ ಮತ್ತಿತರ ನಾಯಕರು ಭಾಗವಹಿಸಿದ್ದರು.

ಬಿಗಿ ಪೊಲೀಸ್ ಭದ್ರತೆ ನಡುವೆ ಗಣೇಶ ಮೂರ್ತಿಗಳ ವಿಸರ್ಜನಾ ಸಮಾರಂಭ ಆರಂಭಗೊಂಡಿದ್ದು, ನಾಳೆ ಮಧ್ಯಾಹ್ನ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.

ಬೃಹತ್ ಗಾತ್ರದ ಗಣೇಶ ಮೂರ್ತಿಗಳಿಂದಾಗಿ ಬೀದಿಗಳಲ್ಲಿ ದಟ್ಟಣೆ ಉಂಟಾಗಿದ್ದು, ಸಯುಕ್ತ ಮಹಾರಾಷ್ಟ್ರ ಚೌಕದ ಮೂಲಕ ಮೊದಲ ಸಾರ್ವಜನಿಕ ಗಣೇಶ ಉತ್ಸವ ಮೂರ್ತಿ ಮೆರವಣಿಗೆ ಸಾಗಿತು. ನಂತರ ಮೆರವಣಿಗೆ ಸಾಗಿದ ಹೆಮ್  ಕಲ್ಯಾಣಿ ಚೌಕದವರೆಗೂ ಮಾರ್ಗದಲ್ಲಿ ಕೆಲ ಬದಲಾವಣೆ ಮಾಡಲಾಗಿತ್ತು.

ಮಹಿಳೆಯರು , ಮಕ್ಕಳು ಸೇರಿದಂತೆ ಲಕ್ಷಾಂತರ ಮಂದಿ ಭಕ್ತಾಧಿಗಳು  ಸಂಭ್ರಮದಲ್ಲಿ ಮುಳುಗಿದ್ದು,   ಸ್ಯ್ನಾಕ್ಸ್ , ಹೂ, ಗುಲಾಲ್ ಮುಂತಾದವುಗಳ ಮಾರಾಟ ಭರ್ಜರಿಯಾಗಿ ಸಾಗಿದೆ.  ಗೋವಾ, ಹುಬ್ಬಳ್ಳಿ, ಕೊಲ್ಹಾಪುರ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿರುವ ಭಕ್ತಾದಿಗಳಿಂದ ನಗರದ ಹೋಟೆಲ್, ಲಾಡ್ಜ್ ಗಳು ಭರ್ತಿಯಾಗಿವೆ.
ಭಾರಿ ಜನಸಂದಣಿಯಿಂದಾಗಿ ಸಾರ್ವಜನಿಕ ಗಣೇಶ ವಿಸರ್ಜನಾ ಮೆರವಣಿಗೆಗೆ ಯಾವುದೇ ಅಡ್ಡಿಯಾಗದಂತೆ  ಕೆಲವು  ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ಇಂದು ಸಂಜೆ ಆರಂಭವಾಗಿರುವ ಮೆರವಣಿಗೆ ನಾಳೆ ಮಧ್ಯಾಹ್ನ 12 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
SCROLL FOR NEXT