ಬೆಂಗಳೂರು: ಯುವ ಕಾಂಗ್ರೆಸ್ ಮುಖಂಡನನ್ನು ದುಷ್ಕರ್ಮಿಗಳು ಸುಮಾರು 2 ಕಿ.ಮೀವರೆಗೆ ಅಟ್ಟಾಡಿಸಿಕೊಂಡು ಹೋಗಿ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯಲಹಂಕದ ಅಲ್ಲಾಳಸಂದ್ರದ 26 ವರ್ಷದ ಅರುಣ್ ಅಲಿಯಾಸ್ ಕ್ಯಾಟ್ ಅರುಣ್ ನನ್ನು ದುಷ್ಕರ್ಮಿಗಳು ಲಾಂಗು-ಮಚ್ಚುಗಳಿಂದ ದಾಳಿ ನಡೆಸಿ ಹತ್ಯೆ ಮಾಡಿ ಪರಾರಿಗಿದ್ದಾರೆ.
ನಿನ್ನೆ ತಡರಾತ್ರಿ 2.30ರ ಸುಮಾರಿಗೆ ಸ್ನೇಹಿತರ ಜೊತೆ ಹೋಗಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ 6 ರಿಂದ 8 ಜನರಿದ್ದ ಗ್ಯಾಂಗ್ ಅರುಣ್ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದೆ. ಈ ಪ್ರಕರಣ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಕೀಯ ವೈಷಮ್ಯದ ಹಿನ್ನೆಲೆ ಅರುಣ್ ಮೇಲೆ ಮಚ್ಚು ಬೀಸಿರುವ ಶಂಕೆ ವ್ಯಕ್ತವಾಗುತ್ತಿದೆ. ಹತ್ಯೆ ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಡಿವಿಆರ್ ವಶಕ್ಕೆ ಪಡೆದ ಯಲಹಂಕ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics