ಕರ್ನಾಟಕ: ರಸ್ತೆ ಗುಂಡಿ ತಪ್ಪಿಸಲು ಹೋದ ಸ್ಕೂಟಿಗೆ ಲಾರಿ ಡಿಕ್ಕಿ, ವ್ಯಕ್ತಿ ಸಾವು
ಮಡಿಕೇರಿ: ರಸ್ತೆ ಗುಂಡಿ ತಪ್ಪಿಸಲು ಹೋದ ದ್ವಿಚಕ್ರ ವಾಹನವೊಂದಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿಸುವ ಘಟನೆ ತೀರ್ಥಗಳ್ಳಿಯಲ್ಲಿ ಮಂಗಳವಾರ ನೆಡದಿದೆ.
ಸುಬ್ರಮಣಿ (50) ಮೃತವ್ಯಕ್ತಿಯಾಗಿದ್ದು, ಈತ ಬೈಲಕುಪ್ಪೆ ನಿವಾಸಿಯಾಗಿದ್ದಾರೆ. ಗೋಣಿಕೊಪ್ಪಲ್ ನಿಂದ ಪೆರಿಯಪಟ್ಟಣಕ್ಕೆ ಸುಬ್ರಮಣಿಯವರು ಪತ್ನಿ ಮಂಜುಳಾ (40) ಜೊತೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.
ತಿಥಿಮತಿ ಗ್ಯಾಸ್ ಗೋದಾಮಿ ಇರುವ ರಸ್ತೆಯ ಗುಂಡಿಮಯಗೊಂಡಿತ್ತು. ರಸ್ತೆಯಲ್ಲಿ ತೆರಳುತ್ತಿದ್ದ ಸುಬ್ರಮಣಿಯವರು ಗುಂಡಿ ತಪ್ಪಿಸಲು ಹೋಗಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಲಾರಿಯೊಂದು ವಾಹನಕ್ಕೆ ರಭಸದಿಂದ ಡಿಕ್ಕಿ ಹೊಡೆದಿದೆ. ಸುಬ್ರಮಣಿಯವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅವರ ಪತ್ನಿ ಮಂಜುಳಾ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗೋಣಿಕೊಪ್ಪಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಅವರನ್ನು ಮೈಸೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಕೇರಳದ ಕೆಎಲ್ 57 ಎಂ 9988 ಸಂಖ್ಯೆಯ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸುಬ್ರಮಣಿಯವರು ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆಕ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics