ರಾಜ್ಯ

ದಕ್ಷ ಪೋಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಗೂಢ ಸಾವಿನ ರಹಸ್ಯ ಬೇಧಿಸಲು ಸಮಿತಿ

Raghavendra Adiga
ಬೆಂಗಳೂರು: ದಕ್ಷ ಪೋಲೀಸ್ ಅಧಿಕಾರಿ ಕೆ. ಮಧುಕರ್ ಶೆಟ್ಟಿ ಸಾವಿನ ರಹಸ್ಯ ಬೇಧಿಸಲು ಸಮಿತಿ ರಚನೆಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮಧುಕರ್ ಶೆಟ್ಟಿಯವರದು ಕೊಲೆಯೆ? ಸಹಜ ಸಾವೆ? ಎಂಬ ಕುರ್ತು ಇನ್ನೂ ನಿಜಾಂಶ ಬಹಿರಂಗವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಮುಂದಾಗಿದ್ದು ಇದಕ್ಕಾಗಿ ತಜ್ಞರ ಸಮಿತಿ ನೇಮಿಸಲಾಗಿದೆ.
ನಾರಾಯಣ ಹೃದಯಾಲಯದ ದೇವಿಪ್ರಸಾದ್ ಶೆಟ್ಟಿ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿಸಲಾಗಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು, ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಕಾರ್ಡಿಯೋಥೊರಾಸಿಕ್‌ ಸರ್ಜರಿ ವಿಭಾಗದ ಡಾ. ಸೀತಾರಾಮ್‌ ಭಟ್ ಸೇರಿ ಹಲವರು ಸಮಿತಿಯಲ್ಲಿದ್ದು ಎರಡು ವಾರಗಳಲ್ಲಿ ಪ್ರಾಥಮಿಕ ತನಿಖಾ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಹೈದರಾಬಾದ್ ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೋಲೀಸ್ ಅಕಾಡಮಿಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಮಧುಕರ್ ಶೆಟ್ಟಿ ಅನಾರೋಗ್ಯಕ್ಕೀಡಾಗಿ ಅಲ್ಲಿನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು.ಆದರೆ ಚಿಕಿತ್ಸೆ ಫಲಕಾಣದೆ ಡಿಸೆಂಬರ್25ಕ್ಕೆ ಅಸುನೀಗಿದ್ದರು.
ದಕ್ಷತೆ, ಪ್ರಾಮಾಣಿಕತೆ, ಕರ್ತವ್ಯಪರತೆಯಿಂದಾಗಿ ನಾಡಿನ ಮನೆಮಾತಾಗಿದ್ದ ಅಧಿಕಾರಿಯೊಬ್ಬರ ಅಕಾಲಿಕ ಮರಣದಿಂದ ರಾಜ್ಯಕ್ಕೆ ರಾಜ್ಯವೇ ದಿಗ್ಭ್ರಮೆಗೊಂಡಿದ್ದು. ಅವರ ಆಪ್ತ ವಲಯದಲ್ಲಿದ್ದವರು ಮಧುಕರ್ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಅವರ ಪತ್ನಿ ಸಹ ಕಾಂಟಿನೆಂಟಲ್ ಆಸ್ಪ್ತ್ರೆಯ ಅಸಮರ್ಪಕ ಚಿಕಿತ್ಸೆ ಕುರಿತು ಅನುಮಾನಗೊಂಡಿದ್ದರು. ಇನ್ನು ಗೃಹಸಚಿವರಾಗಿದ್ದ ಎಂಬಿ ಪಾಟೀಲ್ ಸಂಶಯವಿದ್ದಲ್ಲಿ ತನಿಖೆಗೆ ಆದೇಶಿಸುವದಾಗಿ ಹೇಳಿಕೆ ನಿಡಿದ್ದರು.ಇದರಂತೆ ರಾಜ್ಯ ಸರ್ಕಾರ ಮಧುಕರ್ ಶೆಟ್ಟಿ ಸಾವಿನ ನ್ಯಾಯಾಂಗ ತನಿಖೆಗೆ ನಿರ್ಧರಿಸಿದೆ.
SCROLL FOR NEXT