ರಾಜ್ಯ

ಪ್ರವಾಹ ಪರಿಸ್ಥಿತಿ ನಿಭಾಯಿಸಲು ಯಡಿಯೂರಪ್ಪ ಹೆಣಗಾಟ : ಡಾ.ಜಿ.ಪರಮೇಶ‍್ವರ್

Shilpa D

ಬೆಂಗಳೂರು: ಅನೇಕ ಗೊಂದಲ, ರಾಜಕೀಯ ದೊಂಬರಾಟದ ನಡುವೆ ಸರ್ಕಾರ ರಚನೆ ಮಾಡಿರುವ ಬಿ ಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಹೆಣಗಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಡಾ ಜಿ ಪರಮೇಶ್ವರ್ ಟೀಕಿಸಿದ್ದಾರೆ

ಸದಾಶಿವನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟದ ಸದಸ್ಯರಿಲ್ಲದ ಏಕವ್ಯಕ್ತಿ ಸರ್ಕಾರ ರಾಜ್ಯದಲ್ಲಿದೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಒಬ್ಬರೇ ಕಳೆದ 20 ದಿನಗಳಿಂದ ಸರ್ಕಾರ ನಡೆಸುತ್ತಿದ್ದಾರೆ.

 ಸರ್ಕಾರ ರಚನೆ ಮಾಡುವುದರಲ್ಲಿ ಯಡಿಯೂರಪ್ಪ ತೋರಿಸಿದ್ದ ಪ್ರಯತ್ನವನ್ನು ಮಂತ್ರಿ ಮಂಡಲ ರಚನೆಯಲ್ಲಿ ತೋರಿಸುತ್ತಿಲ್ಲ ಏಕೆ. ಸಂಪುಟ ರಚನೆ ವಿಳಂಬ ಏಕೆ ಎಂದು ಅವರು ಪ್ರಶ್ನಿಸಿದರು.          

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಕಷ್ಟು ಕಸರತ್ತು ನಡೆಸಿದ್ದ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಂಪುಟ ಭರ್ತಿಗೆ ಪ್ರಯತ್ನಿಸುತ್ತಿಲ್ಲದರ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದ್ದಾರೆ.

SCROLL FOR NEXT