ರಾಜ್ಯ

ಹಾಸನ:  ಟ್ರ್ಯಾಕರ್ ಗೆ ಬೈಕ್ ಡಿಕ್ಕಿ- ತಾಯಿ ಮಗ ಸೇರಿ 3 ಸಾವು

Raghavendra Adiga

ಹಾಸನ:  ನಿಂತಿದ್ದ ಟ್ರ್ಯಾಕರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗ ಸೇರಿ ಮೂವರು ಮೃತಪಟ್ಟಿರುವ ಘಟನೆ ಅರಕಲಗೂಡು ತಾಲ್ಲೂಕಿನಲ್ಲಿ ನಡೆದಿದೆ.

ಮಂಜುಳಾ (35), ಆಕಾಶ್ (9) ಮಣಿ (27) ಮತ್ತು ಮೃತ ಡ್ರಾಪ್ ಪಡೆದು ಬೈಕ್ ಹತ್ತಿ ಹೋಗುತ್ತಿದ್ದ ಸಮಯದಲ್ಲಿ ಕಾಟ್ನಾಳು ಬೋರೆ ಹತ್ತಿರ ಈ ದುರ್ಘಟನೆ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ

ಬೈಕ್ ಸವಾರನ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದ್ದು ಎಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಕೊಣನೂರು ಪೋಲಿಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

SCROLL FOR NEXT