ಮೆಟ್ರೋ ರೈಲು 
ರಾಜ್ಯ

ಬೆಂಗಳೂರು: ಮೆಟ್ರೋ ರೈಲಿನಲ್ಲಿ ಮಹಿಳೆಯರು 'ಪೆಪ್ಪರ್ ಸ್ಪ್ರೇ' ಕೊಂಡೊಯ್ಯಲು ಅವಕಾಶ 

ಹೈದ್ರಾಬಾದಿನಲ್ಲಿ ಕಳೆದ ವಾರ ನಡೆದ ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ಮಹಿಳೆಯರ ಸುರಕ್ಷತೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಂತೆ, ಮಹಿಳೆಯರ ಸ್ವಯಂ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಕೊಂಡೊಯ್ಯಲು ಬಿಎಂಆರ್ ಸಿಎಲ್ ಅವಕಾಶ ನೀಡಲು ನಿರ್ಧರಿಸಿದೆ.

ಬೆಂಗಳೂರು: ಹೈದ್ರಾಬಾದಿನಲ್ಲಿ ಕಳೆದ ವಾರ ನಡೆದ ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ಮಹಿಳೆಯರ ಸುರಕ್ಷತೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಂತೆ, ಮಹಿಳೆಯರ ಸ್ವಯಂ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಕೊಂಡೊಯ್ಯಲು ಬಿಎಂಆರ್ ಸಿಎಲ್ ಅವಕಾಶ ನೀಡಲು ನಿರ್ಧರಿಸಿದೆ.

ಇಂಡಿಯನ್ ಎಕ್ಸ್ ಪ್ರೆಸ್ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್. ಯಶವಂತ್ ಚಾವ್ಹಾಣ್, ಸೋಮವಾರದಿಂದ ಮಹಿಳೆಯರು ಪೆಪ್ಪರ್ ಸ್ಪ್ರೈ ಕೊಂಡೊಯ್ಯಲು ಅವಕಾಶ ನೀಡುವಂತೆ ಎಲ್ಲಾ ನಿಲ್ದಾಣದಲ್ಲಿನ ಭದ್ರತಾ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ . ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದ್ದು, ಮಹಿಳೆಯರು ಪೆಪ್ಪರ್ ಸ್ಪ್ರೈ ತೆಗೆದುಕೊಂಡು ಹೋಗಲು ಅವಕಾಶ ನೀಡುವಂತೆ ಸಿಬ್ಬಂದಿಗಳಿಗೆ ತಿಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

 ನಮ್ಮ ಮೆಟ್ರೋ ರೈಲಿನಲ್ಲಿ ಪೆಪ್ಪರ್ ಸ್ಪ್ರೈ ನಿರ್ಬಂಧಿಸಿಲ್ಲ. ಆದರೆ, ಇದು ಇರುವುದು ಕಂಡುಬಂದಲ್ಲಿ ವಿಚಾರಣೆ ನಡೆಸಲಾಗುವುದು, ಬ್ಯಾಗ್ ಗಳ ಸ್ಕಾನರ್ ವೇಳೆಯಲ್ಲಿ ಏರ್ ಸೊಲ್ ಸ್ಪ್ರೈ ಕಂಡುಬಂದಾಗ  ಭದ್ರತೆಯ ದೃಷ್ಟಿಯಿಂದ ಏಕೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂಬುದನ್ನು ಭದ್ರತಾ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಸ್ಪಷ್ಟೀಕರಣ ಪಡೆಯಬೇಕಿದೆ ಎಂದಿದ್ದಾರೆ. 

ಕೆಲ ನಿಲ್ದಾಣಗಳಲ್ಲಿ ಮಹಿಳೆಯರು ಪೆಪ್ಪರ್ ಸ್ಪ್ರೈ ಕೊಂಡೊಯ್ಯಲು ಭದ್ರತಾ ಸಿಬ್ಬಂದಿ ಬಿಡುತ್ತಿಲ್ಲ ಎಂದು ಪಬ್ಲಿಕ್ ಪಾಲಿಸಿ ರಿಸರ್ಚರ್ ಒಬ್ಬರು ಬಿಎಂಆರ್ ಸಿಎಲ್ ಟ್ವೀಟರ್ ಗೆ ಟ್ವೀಟ್ ಮಾಡಿದ ನಂತರ ಈ ವಿಚಾರ ಬೆಳಕಿಗೆ ಬಂದಿತ್ತು.

ಈ ಕುರಿತಂತೆ ಸ್ಪಷ್ಟನೆ ನೀಡಿರುವ ಬಿಎಂಆರ್ ಸಿಎಲ್ ಸಿಬ್ಬಂದಿ, ಇದು ಕೇವಲ ಒಂದು ನಿಲ್ದಾಣದಲ್ಲಿನ ವರದಿಯಾಗಿದೆ. ಭದ್ರತಾ ಸಿಬ್ಬಂದಿಗಳಲ್ಲಿನ ಸಂವಹನ ಕೊರತೆಯಿಂದಾಗಿ ಹೀಗೆ ನಡೆದಿದೆ.ಈ ಸಮಸ್ಯೆಯನ್ನು ಇದೀಗ ಬಗೆಹರಿಸಿರುವುದಾಗಿ ತಿಳಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಿವಾಜಿ ಜೊತೆಗೆ ಟಿಪ್ಪು ಹೋಲಿಕೆ: ವಿವಾದ ಹುಟ್ಟುಹಾಕಿದ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ; ಬಿಜೆಪಿ ಕಿಡಿ!

T20 ವಿಶ್ವಕಪ್ 2026: ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 7 ವಿಕೆಟ್ ಭರ್ಜರಿ ಗೆಲುವು!

ಬ್ರಹ್ಮಪುತ್ರ ನದಿ ಕೆಳಗೆ ದೇಶದ ಮೊದಲ ರಸ್ತೆ-ರೈಲು ಸುರಂಗಕ್ಕೆ ಕೇಂದ್ರ ಸಂಪುಟ ಅನುಮೋದನೆ

ಹಂಪಿ ಉತ್ಸವ: ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿಸಿದ ಸಚಿವ ಜಮೀರ್!

ಹಾಸನ: ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ, ಕೊಲೆ ಶಂಕೆ!

SCROLL FOR NEXT