ರಾಜ್ಯ

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಬಂಡೀಪುರ ಅರಣ್ಯ ಅಧಿಕಾರಿಗಳಿಗೆ ತರಬೇತಿ 

Sumana Upadhyaya

ಬೆಂಗಳೂರು: ಕೌಶಲ್ಯಾವೃದ್ಧಿಗೆ ಬಂಡೀಪುರ ಹುಲಿ ರಕ್ಷಿತಾರಣ್ಯದ ಅರಣ್ಯಾಧಿಕಾರಿಗಳಿಗೆ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಇದೇ ಮೊದಲ ಬಾರಿಗೆ ತರಬೇತಿ ನೀಡಲಾಗುತ್ತಿದೆ.


ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಯುನೆಸ್ಕೊ ಘೋಷಿತ ವಿಶ್ವ ಪಾರಂಪರಿಕ ತಾಣವಾಗಿದ್ದು ಇದು ಕೇವಲ ಅತ್ಯುತ್ತಮ ಪ್ರವಾಸಿ ತಾಣ ಮಾತ್ರವಲ್ಲದೆ, ಅರಣ್ಯ ಸಿಬ್ಬಂದಿಗಳಿಗೆ ಉತ್ತಮ ತರಬೇತಿ ತಾಣವೆಂದು ಕೂಡ ಪ್ರಸಿದ್ಧಿ ಪಡೆದಿದೆ.


ಬಂಡೀಪುರದ ವಿಶೇಷ ಹುಲಿ ರಕ್ಷಿತಾರಣ್ಯದಲ್ಲಿ ನಿಯೋಜನೆಗೊಂಡಿರುವ 18 ಮಂದಿ ಉಪ ಅರಣ್ಯಾಧಿಕಾರಿಗಳಿಗೆ ನಿನ್ನೆಯಿಂದ 8 ದಿನಗಳ ಕಾಲ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ.


ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮಾಜಿ ಪ್ರಧಾನ ಮುಖ್ಯ ಸಂರಕ್ಷಕಾಧಿಕಾರಿ(ಪಿಸಿಸಿಎಫ್) ಬಿ ಜೆ ಹೊಸ್ಮಟ್, ಸೇವಾ ನಿರತ ಪಿಸಿಸಿಎಫ್ ಅವರ ಆದೇಶದ ಮೇರೆಗೆ ನಾನು ಅಧಿಕಾರಿಗಳ ತಂಡವನ್ನು ಇಲ್ಲಿಗೆ ಕರೆತಂದಿದ್ದೇನೆ. ಇಲ್ಲಿ ನಡೆಯುವ ಕಾರ್ಯಾಗಾರ, ತರಬೇತಿ ಮತ್ತು ಸಮಸ್ಯೆಗಳ ವಿನಿಮಯದಿಂದ ವನ್ಯಜೀವಿಗಳ ಸಂರಕ್ಷಣೆ ಹೆಚ್ಚಾಗುತ್ತದೆ. ಇಲ್ಲಿನ ಕಷ್ಟವಾದ ಪರ್ವತ ಪ್ರದೇಶ ಮತ್ತು ಭೌಗೋಳಿಕ ಪ್ರದೇಶಗಳಿಂದಾಗಿ ಕಾಜಿರಂಗಾ ಕಲಿಯುವಿಕೆಗೆ ಉತ್ತಮ ಸ್ಥಳ. ಈ ಸ್ಥಳವು ಖಡ್ಗಮೃಗಗಳು ಮತ್ತು ಹುಲಿಗಳಿಗೆ ನೆಲೆಯಾಗಿದೆ, ಇಲ್ಲಿ ಸಾಕಷ್ಟು ಮಾನವ-ಪ್ರಾಣಿ ಸಂಘರ್ಷ ಏರ್ಪಡುತ್ತದೆ. ಹೊಸದಾಗಿ ನೇಮಕಗೊಂಡವರು ಮತ್ತು ಎಂಟು ವರ್ಷಗಳ ಸುದೀರ್ಘ ತರಬೇತಿಯ ನಂತರ ಕೇವಲ ಆರು ತಿಂಗಳ ಹಿಂದೆ ನಿಯೋಜನೆಗೊಂಡವರು ಇಲ್ಲಿಗೆ ಬಂದಿದ್ದಾರೆ ಎಂದರು.

SCROLL FOR NEXT