ರಾಜ್ಯ

ಚಾಮರಾಜನಗರ: ಕಾಡ್ಗಿಚ್ಚು ತಡೆಗಟ್ಟಲು ಫೈರ್ ಲೈನ್ ಕೆಲಸ ಆರಂಭ

Srinivasamurthy VN

ಬಿಳಿಗಿರಿರಂಗನಬೆಟ್ಟ ಹಾಗೂ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕಾರ್ಯ

ಚಾಮರಾಜನಗರ: ಕಾಡಿಗೆ ಕಂಟಕ ಪ್ರಾಯವಾದ ಬೆಂಕಿ ತಡೆಗೆಟ್ಟಲು ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮಾಡುವ ಫೈರ್ ಲೈನ್ ಕಟಿಂಗ್​ ಬಹುತೇಕ ಪೂರ್ಣವಾಗಿದ್ದು, ಈ ಬಾರಿ ಸಂರಕ್ಷಣೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ.

ಬೇಸಿಗೆ ಬಂತೆಂದರೆ ಕಾಡಿಗೆ ಕಂಟಕ ಪ್ರಾಯವಾದ ಬೆಂಕಿ ತಡೆಗೆಟ್ಟಲು ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮಾಡುವ ಫೈರ್ ಲೈನ್ ಕಟಿಂಗ್​ ಬಹುತೇಕ ಪೂರ್ಣವಾಗಿದೆ. ಬಿಆರ್​ಟಿ ಮತ್ತು ಬಂಡೀಪುರದಲ್ಲಿ ಫೈರ್ ಲೈನ್ ಕಟಿಂಗ್ ಬಹುತೇಕ ಪೂರ್ಣ!ಅರಣ್ಯದೊಳಗಿನ ಗೇಮ್ ರಸ್ತೆಗಳು, ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ 5-10 ಮೀ. ಅಗಲಕ್ಕೆ ಕಾಡಿನ ಕಳೆ ತೆಗೆಯಲಾಗುತ್ತಿದ್ದು ಒಣಗಿದ ಬಳಿಕ ಸುಡಲಿದ್ದಾರೆ. ಈಗಾಗಲೇ ಎರಡೂ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕಟಿಂಗ್ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಜ.15ರೊಳಗೆ ಕಳೆಗಿಡಗಳನ್ನು ಸುಟ್ಟು ಬೆಂಕಿ ಬೀಳದಂತೆ ಕಟ್ಟೆಚ್ಚರ ವಹಿಸಲಿದ್ದಾರೆ. 

ಕಳೆದ 15 ವರ್ಷದಲ್ಲಿ ಪದೇ-ಪದೆ ಬೆಂಕಿಗೆ ಬೀಳುತ್ತಿರುವ ಪ್ರದೇಶಗಳಾವುವು ಮತ್ತು ಆಗ ಕೈಗೊಂಡಿದ್ದ ಕ್ರಮಗಳೇನು ಎಂಬುದನ್ನೆಲ್ಲ ಒಗ್ಗೂಡಿಸಿ ಈ ಬಾರಿ ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಬೆಂಕಿ ರೇಖೆ ನಿರ್ಮಾಣ ಮಾಡುತ್ತಿದೆ. ಕಳೆದ ಬಾರಿ ಬಂಡೀಪುರ ಧಗಧಗಿಸಲು ವ್ಯವಸ್ಥಿತವಾದ ಬೆಂಕಿ ರೇಖೆ ಇಲ್ಲದಿರುವುದೇ ಮುಖ್ಯ ಕಾರಣವಾಗಿದ್ದರಿಂದ ಕಳೆದ ಬಾರಿ ಬೆಂಕಿ ಬಿದ್ದಿದ್ದ ಪ್ರದೇಶದಲ್ಲಿ ಇದೀಗ ಹೆಚ್ಚಿನ ಒತ್ತು ನೀಡಲಾಗುತ್ತಿದೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2,550 ಕಿ.ಮೀ ಹಾಗೂ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ 1000 ಕಿ.ಮೀ.ಗೂ ಹೆಚ್ಚು ಬೆಂಕಿ ರೇಖೆಯನ್ನು ನಿರ್ಮಾಣ ಮಾಡಲಾಗಿದೆ.

-ಗೂಳಿಪುರ ನಂದೀಶ ಎಂ

SCROLL FOR NEXT