ರಾಜ್ಯ

ಕಲಬುರಗಿ: ಬೆಳ್ಳಂಬೆಳಗ್ಗೆ ಚೆಕ್‌ಪೋಸ್ಟ್‌ ಮೇಲೆ ಎಸಿಬಿ ದಾಳಿ

Nagaraja AB

ಕಲಬುರಗಿ: ಬೆಳ್ಳಂಬೆಳಿಗ್ಗೆ ಆರ್ ಟಿ ಓ ಚೆಕ್ ಪೋಸ್ಟ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣ ಹೊರವಲಯದಲ್ಲಿರುವ ಆರ್ ಟಿ ಓ ಚೆಕ್ ಪೊಸ್ಟ್ ಮೇಲೆ  ಎಸಿಬಿ ಡಿವೈಎಸ್‌ಪಿ ಸುಧಾ ಆದಿ ನೇತೃತ್ವದಲ್ಲಿ 15 ಕ್ಕೂ ಅಧಿಕ ಸಿಬ್ಬಂದಿಗಳಿಂದ ದಾಳಿ ನಡೆಸಲಾಗಿದೆ.

ರಿಬ್ಬನಪಲ್ಲಿ-ವಾಗ್ದರಿ ಹೆದ್ದಾರಿಗೆ ಹೊಂದಿಕೊಂಡಿರುವ ಚೆಕ್‌ಪೋಸ್ಟ್ ಇದಾಗಿದ್ದು, ವಾಹನ ಚಾಲಕರಿಂದ ಹಣ ವಸೂಲಿ ದೂರಿನ ಮೇರೆಗೆ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

SCROLL FOR NEXT