ಸಾಂದರ್ಭಿಕ ಚಿತ್ರ 
ರಾಜ್ಯ

ದೇಶ ಕಾಯುವ ಸೈನಿಕರೇ ಸತ್ತರೆ ನಮ್ಮನ್ನು ರಕ್ಷಿಸುವವರು ಯಾರು: ಗದಗ ಗ್ರಾಮಸ್ಥರ ಆತಂಕ

ಸುಮಾರು 4 ಸಾವಿರ ಜನಸಂಖ್ಯೆಯಿರುವ ಗದಗ ಜಿಲ್ಲೆ ಹಟಲಗೇರಿ ಗ್ರಾಮದಲ್ಲಿ ಸುಮಾರು 150 ಮಂದಿ ಸೈನಿಕರು ದೇಶ ಕಾಯಲು ತಮ್ಮ ಜೀವನನ್ನು ಮುಡುಪಾಗಿಟ್ಟಿದ್ದಾರೆ...

ಗದಗ: ಸುಮಾರು 4 ಸಾವಿರ ಜನಸಂಖ್ಯೆಯಿರುವ ಗದಗ ಜಿಲ್ಲೆ  ಹಟಲಗೇರಿ ಗ್ರಾಮದಲ್ಲಿ ಸುಮಾರು 150 ಮಂದಿ ಸೈನಿಕರು ದೇಶ ಕಾಯಲು ತಮ್ಮ ಜೀವನನ್ನು ಮುಡುಪಾಗಿಟ್ಟಿದ್ದಾರೆ.
ಈ ಗ್ರಾಮದ ಪ್ರತಿಯೊಂದು ರಸ್ತೆಯ ಎರಡು ಮನೆಗಳಲ್ಲಿ ಇಬ್ಬರು ಯೋಧರು ದೇಶ ಕಾಯುತ್ತಿದ್ದಾರೆ, ಬಿಎಸ್ ಎಫ್, ಸಿಎರ್ ಪಿಎಫ್ ಮತ್ತು, ಸೇನೆಗೆ ಸೇರಿಸುತ್ತಾರೆ. ಇದೊಂದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ.
ಪುಲ್ವಾಮ ದಾಳಿ ಬಗ್ಗೆ ಮಾತನಾಡಿರುವ ಇಲ್ಲಿನ ಜನ ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಬಗ್ಗೆ ಆತಂಕಗೊಂಡಿದ್ದಾರೆ. ಈ ಗ್ರಾಮದ ಯಲ್ಲಪ್ಪ ಮತ್ತು ನೀಲವ್ವ ದಂಪತಿಗೆ ನಾಲ್ಕು ಮಕ್ಕಳಿದ್ದು, ಅದರಲ್ಲಿ ಮೂವರು ಮಕ್ಕಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸತ್ಯಪ್ಪ ಬೆಂಟೂರ್ ಕುಟುಂಬದ ಮೂವರು ಮಕ್ಕಳು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಪುಲ್ವಾಮಾ ದಾಳಿಯ ಸುದ್ದಿ ಈ ಗ್ರಾಮಸ್ಥರಿಗೆ ಆಘಾತ ತಂದಿದೆ, ದೇಶ ಕಾಯುವ ಸೈನಿಕರೇ ಸತ್ತರೆ ನಮ್ಮನ್ನು ರಕ್ಷಿಸುವವರು ಯಾರು, ನನ್ನ ಮಕ್ಕಳು ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ನಮ್ಮ ಮಕ್ಕಳ ಫೋನ್ ಕರೆ ಗಳಿಗಾಗಿ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ