ರಾಜ್ಯ

ಫೇಸ್ ಬುಕ್ ಸ್ನೇಹಿತನಿಂದ ದರೋಡೆ, ಮೂವರ ಬಂಧನ

Sumana Upadhyaya

ಬೆಂಗಳೂರು: ಫೇಸ್ ಬುಕ್ ಸ್ನೇಹಿತನ ಮಾತನ್ನು ನಂಬಿ 24 ವರ್ಷದ ಯುವಕ ಮೋಸ ಹೋದ ಘಟನೆ ನಡೆದಿದೆ. ಮೂವರು ದುಷ್ಕರ್ಮಿಗಳು ಪೊಲೀಸರು ಎಂದು ಹೇಳಿಕೊಂಡು ಬಂದು ಹೊಡೆದು ದರೋಡೆ ಮಾಡಿದ ಪ್ರಸಂಗ ನಡೆಯಿತು. ಮೂವರು ದುಷ್ಕರ್ಮಿಗಳನ್ನು ಅಕ್ಷಯ್ ಕುಮಾರ್, ಕಿರಣ್ ಮತ್ತು ಮನು ಎಂದು ಗುರುತಿಸಲಾಗಿದ್ದು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ಕಳೆದ 4ರಂದು ಈ ಘಟನೆ ನಡೆದಿದೆ. ಹುಡುಗಿಯೊಬ್ಬಳ ಜೊತೆ ಸರಸವಾಡೋಣ ಬಾ ಎಂದು ಫೇಸ್ ಬುಕ್ ನಲ್ಲಿ ಸುಬ್ರಹ್ಮಣ್ಯ ಎಂಬುವವನು ಸುನಿಲ್ ಕುಮಾರ್ ಎಂಬುವವನನ್ನು ಕರೆಯುತ್ತಾನೆ. ಅದರಂತೆ ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ಮಹಲ್ ನಲ್ಲಿ ಬರಲು ಮಾತುಕತೆಯಾಗುತ್ತದೆ. ಇವರಿಬ್ಬರೂ ಸ್ನೇಹಿತರಾಗಿದ್ದು ಡಿಸೆಂಬರ್ 31ರಂದು.

ಸುಬ್ರಹ್ಮಣ್ಯ ಹೇಳಿದ ಸ್ಥಳಕ್ಕೆ ಬಂದಾಗ ಫೋನ್ ನಂಬರ್ ಮತ್ತು ಇರುವ ಸ್ಥಳವನ್ನು ಹೇಳುವಂತೆ ಸುನಿಲ್ ಹೇಳುತ್ತಾನೆ. ಸುಬ್ರಹ್ಮಣ್ಯ ಜನವರಿ 4ರಂದು ರಾತ್ರಿ 10.30ರ ಸುಮಾರಿಗೆ ಲೇಕ್ ರಸ್ತೆಗೆ ಬಂದಾಗ ಇಬ್ಬರು ದುಷ್ಕರ್ಮಿಗಳು ಅವನ ಬಳಿ ಬಂದು ಅನೇಕ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುತ್ತಾರೆ. ತಾನು ಸ್ನೇಹಿತನನ್ನು ಭೇಟಿ ಮಾಡಲು ಬಂದಿದ್ದೇನೆ ಎಂದಾಗ ಅವರಿಬ್ಬರೂ ಮೊಬೈಲನ್ನು ಕಿತ್ತು ಸುಬ್ರಹ್ಮಣ್ಯನ ಮೇಲೆ ಹಲ್ಲೆ ನಡೆಸಿ ಮತ್ತೊಂದು ರಸ್ತೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಮತ್ತೊಬ್ಬ ಕಾಯುತ್ತಿದ್ದನು.

ಸುಬ್ರಹ್ಮಣ್ಯ ಕೂಡಲೇ ಜಾಗೃತನಾಗಿ ತನ್ನ ಸ್ನೇಹಿತನಿಗೆ ವಿಷಯ ತಿಳಿಸುತ್ತಾನೆ. ಅವರು ಪೊಲೀಸರಿಗೆ ತಿಳಿಸಿದಾಗ ಹೊಯ್ಸಳ ಜೀಪು ಸ್ಥಳಕ್ಕೆ ಬಂದಿತು. ಪೊಲೀಸರನ್ನು ಕಂಡು ಮೂವರು ಪರಾರಿಯಾದರು.

SCROLL FOR NEXT