ಬೆಂಗಳೂರು: ರೈತ ಪರ ಸರ್ಕಾರವನ್ನು ಕದಡಿಸಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳ ಊರುಭಂಗವಾಗಲಿದ್ದು ಈ ಪರ್ವ ಅನ್ನದಾತ ರೈತರು ಹಾಗೂ ಸಮಸ್ತ ಜನತೆಯ ಮನ-ಮನೆಗಳಲ್ಲಿ ಸುಖ, ಶಾಂತಿ, ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಾಡಿನ ಜನತೆಗೆ ಸಂಕ್ರಾಂತಿಯ ಶುಭಾಶಯ ಕೋರಿದ್ದಾರೆ.
ದೇವೇಗೌಡರು ತಮ್ಮ ಟ್ವೀಟ್ ಮೂಲಕ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರುತ್ತಲೇ ರಾಜ್ಯ ಸರ್ಕಾರವನ್ನು ಬೀಳಿಸಲೆತ್ನಿಸುವ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
"ಸಮಸ್ತರಿಗೂ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಈ ಸಂದರ್ಭದಲ್ಲಿ ರೈತ ಪರ ಸರ್ಕಾರವನ್ನು ಕದಡಿಸಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳ ಊರುಭಂಗವಾಗಲಿದ್ದು ಈ ಪರ್ವ ಅನ್ನದಾತ ರೈತರು ಹಾಗೂ ಸಮಸ್ತ ಜನತೆಯ ಮನ-ಮನೆಗಳಲ್ಲಿ ಸುಖ, ಶಾಂತಿ, ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ." ದೇವೇಗೌಡ ಟ್ವೀಟ್ ಮಾಡಿದ್ದಾರೆ.
ಜೆಡಿಎಸ್ ಶಾಸಕರನ್ನು ಕಮಲ ಪಕ್ಷದ ನಾಯಕರು ತಮ್ಮತ್ತ ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಎರಡು ದಿನಗಳಿಂದ ಹರಿದಾಡುತ್ತಿರುವ ಹಿನ್ನೆಲೆಯಲಿ ದೇವೇಗೌಡರ ಈ ಟ್ವೀಟ್ ಅವರಲ್ಲಿನ ಆತಂಕಕ್ಕೆ ಸಾಕ್ಷಿಯಂತಿದೆ.
ಇನ್ನು ಆಪರೇಷನ್ ಕಮಲ್ದ ಭಯದಿಂದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಪಕ್ಷದ ಎಲ್ಲಾ ಶಾಸಕರೆಅನ್ನು ಇಂದು ಸಂಜೆಯೊಳಗೆ ಬೆಂಗಳೂರಿಗೆ ಬರಹೇಳಿದ್ದು ಶಾಸಕರನ್ನು ರೆಸಾರ್ಟ್ಗೆ ಶಿಫ್ಟ್ ಮಾಡುವ ಯೋಜನೆ ಇದೆ ಎನ್ನಲಾಗಿದೆ.