ರಾಜ್ಯ

ಶ್ರೀಗಳು ಕೊಟ್ಟ ಕಾರಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ್ದ ಈ ಶಾಸಕನಿಗೆ ಸಿಕ್ತು ಹ್ಯಾಟ್ರಿಕ್ ಗೆಲುವು!

Raghavendra Adiga
ವಿಜಯಪುರ: ನಡೆದಾಡುವ ದೇವರು, ಕಾಯಕಯೋಗಿ ಸಿದ್ದಗಂಗೆಯ ರತ್ನದಂತಿದ್ದ ಡಾ. ಶಿವಕುಮಾರ ಸ್ವಾಮಿಗಳು ತಮ್ಮ ಶಿಷ್ಯ, ಶಾಸಕರೊಬ್ಬರಿಗೆ ನೀಡಿದ್ದ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ದಕ್ಕೆ ಆ ಶಾಸಕ ಸತತ ಮೂರು ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
111 ವರ್ಷ ಬದುಕಿ ಸೋಮವಾರ ದೇಹತ್ಯಾಗ ಮಾಡಿರುವ ಶ್ರೀಗಳಿಂದ ಕಾರನ್ನು ಪಡೆದು ಹ್ಯಾಟ್ರಿಕ್ ಗೆಲುವು ಸಾಧಿಸಿದ ಆ ಶಾಸಕರೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ಬಿಜೆಪಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ! 
ಹೌದು, ಶಿವಕುಮಾರ ಸ್ವಾಮಿಗಳ ಶಿಷ್ಯನ್ಬಾಗಿದ್ದ ಪಾಟೀಲ ನಡಹಳ್ಳಿ ಅವರಿಗೆ ನಾಮಪತ್ರ ಸಲ್ಲಿಕೆಗಾಗಿ ಗುರುಗಳು ತಮ್ಮ ಕಾರನ್ನೇ ನೀಡಿದ್ದರು.ಸ್ವಾಮಿಗಳು ತಾವು ಬಳಸುತ್ತಿದ್ದ ಮರ್ಸಿಡೀಸ್ ಬೆಂಜ್ ಕಾರನ್ನು ನಡಹಳ್ಳಿ ಅವರಿಗೆ ನೀಡಿದ್ದ ಶ್ರೀಗಳು ನಾಮಪತ್ರ ಸಲ್ಲಿಕೆಗೆ ಇದೇ ಕಾರಲ್ಲಿ ಹೋಗು, ಎಂದು ಆದೇಶಿಸಿದ್ದರು. ಇಂದೂ ಸಹ ಶಾಸಕ ತಮ್ಮ ಮನೆಯಲ್ಲಿ ಆ ಕಾರನ್ನು ಜೋಪಾನವಾಗಿರಿಸಿಕೊಂಡಿದ್ದಾರೆ.
"ಮಠದಲ್ಲಿ ಬಸವಣ್ಣನ ತತ್ವಗಳನ್ನೇ ಪ್ರಯೋಗ ಮಾಡಲಾಗುತ್ತಿತ್ತು" ಎನ್ನುವ ಶಾಸಕ ನಡಹಳ್ಳಿ "ತಂದೆ-ತಾಯಿ ನನಗೆ ಜನ್ಮ ನೀಡಿದ್ದು ನಿಜ,  ಆದರೆ, ಅಕ್ಷರ ಜ್ಞಾನ ಕೊಟ್ಟಿದ್ದು ಸಿದ್ಧಗಂಗಾ ಶ್ರೀಗಳು. ನಾನು ಸಮಾಜ ಗುರುತಿಸುವ ವ್ಯಕ್ತಿಯಾಗಿದ್ದಾದರೆ ಇದು ಸ್ವಾಮೀಜಿಯ ಆಶೀರ್ವಾದದಿಣ್ದ  ದಾಸೋಹ ಪದ್ದತಿಯ ತಿಳುವಳಿಕೆ ನೀಡಿದವರೇ ಶ್ರೀಗಳು. ಶ್ರೀಗಳು ನನಗೆ ಸಾಮೂಹಿಕ ವಿವಾಹ ನಡೆಸಿ ಬಡವರಿಗೆ ನೆರವಾಗುವಂತೆ ಸಲಹೆ ನೀಡಿದ್ದರು" ಎಂದು ಹೇಳಿದ್ದಾರೆ.
SCROLL FOR NEXT